ADVERTISEMENT

ಕಾರವಾರ | ಭಾರಿ ಮಳೆ: ಮೇಲ್ಸೇತುವೆ ತಳಭಾಗ ಜಲಾವೃತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 14:05 IST
Last Updated 12 ಜುಲೈ 2024, 14:05 IST
ಕಾರವಾರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ತಳಭಾಗದಲ್ಲಿ ಮಳೆನೀರು ನಿಂತಿರುವುದು
ಕಾರವಾರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ತಳಭಾಗದಲ್ಲಿ ಮಳೆನೀರು ನಿಂತಿರುವುದು   

ಕಾರವಾರ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಶುಕ್ರವಾರ ತುಸು ಬಿರುಸು ಪಡೆಯಿತು. ಆದರೆ, ನಿರಂತರವಾಗಿ ಸುರಿಯದೆ ಆಗಾಗ ಮಾತ್ರ ಮಳೆ ಬಿದ್ದಿದ್ದರಿಂದ ಜಲಾವೃತದಂತಹ ಸಮಸ್ಯೆ ಸೃಷ್ಟಿಯಾಗಲಿಲ್ಲ.

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವ ಸಮಯದಲ್ಲಿ ಮಳೆ ಸುರಿದಿದ್ದರಿಂದ ಅವರು ಪರದಾಡಿದರು. ಚೆಂಡಿಯಾ, ಅರ್ಗಾ ಗ್ರಾಮಗಳ ಬಳಿ ಹೆದ್ದಾರಿಯಲ್ಲಿ ಕೆಲ ನಿಮಿಷ ನೀರು ನಿಂತಿತ್ತು.

ರಭಸದ ಮಳೆ ಬಿದ್ದ ಪರಿಣಾಮ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಮೇಲ್ಸೇತುವೆಯ ತಳಭಾಗದಲ್ಲಿ ನೀರು ನಿಲ್ಲುವಂತಾಗಿತ್ತು. ಕೆಲ ನಿಮಿಷಗಳ ಕಾಲ ಮಳೆ ಸುರಿದರೂ ಇಲ್ಲಿ ತಾಸುಗಟ್ಟಲೆ ನೀರು ನಿಲ್ಲುತ್ತಿದೆ. ಇದರಿಂದ ಡೆಂಗಿ ಹರಡುವ ಆತಂಕ ಎದುರಾಗಿದೆ. ಮೇಲ್ಸೇತುವೆಯ ಕೆಳಭಾಗದಿಂದ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮೇಲ್ಸೇತುವೆ ಕೆಳಭಾಗದಲ್ಲಿ ಲಾರಿ ನಿಲುಗಡೆ ಮಾಡುವ ಚಾಲಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.