ಹಳಿಯಾಳ: ತಾಲ್ಲೂಕಿನಲ್ಲಿ ಕಳೆದ ಎರಡು ವಾರಗಳ ನಿರಂತರ ಮಳೆಯಿಂದ 64 ಮನೆ ಗೋಡೆಗಳಿಗೆ ಹಾನಿಯಾಗಿದೆ.
ಗುರುವಾರ ಮುರ್ಕವಾಡ ಗ್ರಾಮದ ಸತೀಶ ನಾರಾಯಣ ಹಳದನಕರ ಮನೆಯ ಗೋಡೆ ಸಂಪೂರ್ಣ ಬಿದ್ದು ಹಾನಿಯಾಗಿದೆ. ಶಿವಪುರ ಗ್ರಾಮದ ಶೈಲಾ ಚಂದ್ರು ಕುಂಬಾರ ಅವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಗೀಡಾದ ಮನೆಗಳ ಸರ್ವೆ ಕಾರ್ಯ ನಡೆಸಿ ಪರಿಶೀಲಿಸಿರುತ್ತಾರೆ. ಈವರೆಗೆ ತಾಲೂಕಿನಲ್ಲಿ 94.66 ಸೆಂ.ಮೀ ಮಳೆಯಾಗಿದ್ದು ಗುರುವಾರ 19.2 ಮಿ.ಮೀ ಮಳೆಯಾಗಿದೆ
ತಾಲ್ಲೂಕಿನಲ್ಲಿ ಈಗಾಗಲೇ ಬೆಳೆದಂತಹ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಅಡಿಕೆ, ಬಾಳೆ ನೂತನವಾಗಿ ಬೆಳೆಸಲಾದ ಡ್ರ್ಯಾಗನ್ ಫ್ರೂಟ್ ಬೆಳೆ ಉತ್ತಮವಾಗಿವೆ. ಆದರೆ ಮತ್ತೆ ನಿರಂತರ ಮಳೆ ಬಿದ್ದರೆ ಈ ಎಲ್ಲ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ. ಈಗಾಗಲೇ ಮಾವಿನ ಬೆಳೆಗೆ ವಿಮಾ ಯೋಜನೆ ಪ್ರಾರಂಭವಾಗಿದ್ದು ಜುಲೈ 31 ಕೊನೆಯ ದಿನವಾಗಿದೆ. ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕಾ ನಿರ್ದೇಶಕರಾದ ಎ.ಆರ್ ಹೇರಿಯಾಳ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿಯ ಭತ್ತ, ಗೋವಿನ ಜೋಳ, ಕಬ್ಬು ಬೆಳೆ ಉತ್ತಮ ವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.