ಸಿದ್ದಾಪುರ: ತಾಲ್ಲೂಕಿನ ಹೆಗ್ಗೋಡುಮನೆಯಲ್ಲಿ ನಮ್ಮ ಹಿರಿಯರು 1925ರಲ್ಲಿ ನಿರ್ಮಿಸಿದ ಮನೆ ‘ಆಸರೆ’ಗೆ ನೂರು ವಸಂತಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮೇ 24ರಂದು ಶತ ಸಂಭ್ರಮ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ವಕೀಲ, ಹೆಗ್ಗೋಡುಮನೆ ಕುಟುಂಬದ ಹಿರಿಯ ಎಂ.ಎಸ್. ಗೌಡರ್ ತಿಳಿಸಿದರು.
ಹೆಗ್ಗೋಡುಮನೆಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮೇ 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 24ರಂದು ಬೆಳಿಗ್ಗೆ 10.35ಕ್ಕೆ ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ’ ಎಂದು ತಿಳಿಸಿದರು.
‘ಇಲ್ಲಿ 1925ರಲ್ಲಿಯೇ ಕೊಳವೆ ಬಾವಿ ತೆಗೆಸಲಾಗಿತ್ತು. ಈ ಮನೆಯ ಉಪ್ಪರಿಗೆಯಲ್ಲಿ ಸದಾ ಕಾಲ 50ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಆಶ್ರಯ ಪಡೆದು ಕರಪತ್ರ ಮುಂತಾದವುಗಳನ್ನು ಸಿದ್ಧಪಡಿಸುತ್ತಿದ್ದ ಬಗ್ಗೆ ಹಿರಿಯರು ಹೇಳಿದ್ದಾರೆ’ ಎಂದರು.
ಸಿ.ಎಸ್. ಗೌಡರ್, ನಾಗರಾಜ ಗೌಡರ್, ಸತೀಶ ಗೌಡರ್, ಗಂಗಾಧರ ಗೌಡರ್, ಕೆ.ಪಿ. ಗೌಡರ್, ಸುಧೀರ ಗೌಡರ್, ಷಣ್ಮುಖ ಗೌಡರ್, ಬಸವರಾಜ ಗೌಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.