ADVERTISEMENT

ಗೋಕರ್ಣ | ಧರ್ಮದ ರಕ್ಷಣೆಗೆ ಎಲ್ಲರೂ ಒಂದಾಗಿ: ಭಾವೇಶಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:24 IST
Last Updated 6 ಜನವರಿ 2026, 7:24 IST
ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಕಾರವಾರ ರಾಮಕೃಷ್ಣ ಮಠದ ಭಾವೇಶಾನಂದ ಸ್ವಾಮೀಜಿ ಮಾತನಾಡಿದರು  
ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಕಾರವಾರ ರಾಮಕೃಷ್ಣ ಮಠದ ಭಾವೇಶಾನಂದ ಸ್ವಾಮೀಜಿ ಮಾತನಾಡಿದರು     

ಗೋಕರ್ಣ: ‘ನಮ್ಮ ಸನಾತನ ಹಿಂದೂ ಧರ್ಮ ಎಲ್ಲ ಧರ್ಮಕ್ಕೂ ಮೂಲ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಧರ್ಮ ರಕ್ಷಿಸಬೇಕಾಗಿದೆ. ಆಗ ಮಾತ್ರ ನಮ್ಮ ಮಾತೃಭೂಮಿ ಸುರಕ್ಷಿತವಾಗಿರಲು ಸಾಧ್ಯ’ ಎಂದು ಕಾರವಾರ ರಾಮಕೃಷ್ಣ ಮಠದ ಭಾವೇಶಾನಂದ ಸ್ವಾಮೀಜಿ ಹೇಳಿದರು.

 ಸಮೀಪದ ಗಂಗಾವಳಿಯಲ್ಲಿ  ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಿಂದೂ ಧರ್ಮದಲ್ಲಿ ಎಲ್ಲರಿಗೂ ಗೌರವವಿದೆ. ನಮ್ಮಲ್ಲಿನ ವೈಮನಸ್ಸು ಬಿಟ್ಟು ಧರ್ಮ ರಕ್ಷಣೆಗೆ, ಮಾತೃಭೂಮಿ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು ಎಂದರು.

ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಂದ್ರಶೇಖರ ಹೆಗಡೆ ಮಾತನಾಡಿ,  ನಮ್ಮ ಧರ್ಮ ಹಾಳಾಗುತ್ತಿರುವುದು ನಮ್ಮ ನಮ್ಮಲ್ಲಿನ ವೈಮನಸ್ಸು, ದ್ವೇಷ, ಅಸೂಯೆಯಿಂದ. ಇದು ಅನ್ಯಧರ್ಮೀಯರಿಗೆ ಆಹಾರವಾಗಿದೆ. ನಮ್ಮಲ್ಲಿನ ಒಡಕನ್ನು ಅವರು ಬಂಡವಾಳವಾಗಿ ಉಪಯೋಗಿಸಿಕೊಳ್ಳುತ್ತಿವೆ. ನಮ್ಮ ಧರ್ಮೀಯರ ಮೇಲೆ ಆಕ್ರಮಣ ಮಾಡುತ್ತಿವೆ. ಧರ್ಮದ ರಕ್ಷಣೆಗೆ ನಾವೆಲ್ಲಾ ಬದ್ಧರಾಗೋಣ’ ಎಂದು ತಿಳಿಸಿದರು.

ADVERTISEMENT

ದಶರಥ ಕೇರಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗಾವಳಿಯ ಹಿಂದೂ ಸಮಾಜೋತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ ಕಿಣಿ ವೇ ಇದ್ದರು. ರಾಮ ಮತ್ತು ಹನುಮನ ಯಕ್ಷಗಾನ ವೇಷ ಎಲ್ಲರ ಮನಸೆಳೆಯಿತು.

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಪೂರ್ವದಲ್ಲಿ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ಗಂಗಾವಳಿಯ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಾವಿರಾರು ಹಿಂದೂ ಬಾಂಧವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.