ADVERTISEMENT

ಭೂಕುಸಿತ: ರಾಷ್ಟ್ರೀಯ ಹೆದ್ದಾರಿ-69ರ ಹೊನ್ನಾವರ-ಸಿದ್ದಾಪುರ ರಸ್ತೆ ಸಂಪರ್ಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 9:25 IST
Last Updated 16 ಜುಲೈ 2022, 9:25 IST
ಭೂಕುಸಿತ: ರಾಷ್ಟ್ರೀಯ ಹೆದ್ದಾರಿ-69ರ ಹೊನ್ನಾವರ-ಸಿದ್ದಾಪುರ ರಸ್ತೆ ಸಂಪರ್ಕ ಸ್ಥಗಿತ
ಭೂಕುಸಿತ: ರಾಷ್ಟ್ರೀಯ ಹೆದ್ದಾರಿ-69ರ ಹೊನ್ನಾವರ-ಸಿದ್ದಾಪುರ ರಸ್ತೆ ಸಂಪರ್ಕ ಸ್ಥಗಿತ   

ಹೊನ್ನಾವರ: ತಾಲ್ಲೂಕಿನ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-69 ರಲ್ಲಿ ಗುಡ್ಡ ಕುಸಿತದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಸ್ತೆಯ ಕೆಳಭಾಗದ ಗುಡ್ಡ ಕುಸಿದ್ದರಿಂದ ಅರ್ಧದಷ್ಟು ರಸ್ತೆಯೂ ಕುಸಿತವಾಗಿದೆ. ಇದರಿಂದಾಗಿ ಹೊನ್ನಾವರದಿಂದ ಗೇರುಸೊಪ್ಪ ಮಾರ್ಗವಾಗಿ ಸಿದ್ದಾಪುರ, ತಾಳಗುಪ್ಪಕ್ಕೆ ಸಂಚರಿಸುವ ಮಾರ್ಗ ಕಡಿತವಾಗಿದೆ.

'ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಹೊನ್ನಾವರದಿಂದ ಸಿದ್ದಾಪುರ, ಜೋಗ, ಸಾಗರ ಕಡೆಗೆ ಹೋಗುವ ವಾಹನಗಳು ಕುಮಟಾ- ಸಂತೆಗುಳಿ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳಬಹುದು' ಎಂದು ತಾಲ್ಲೂಕಾಡಳಿತ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.