
ಹೊನ್ನಾವರ: ‘ಗೋವಿಂದ ಹೆಗಡೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಅಪೂರ್ವ ಕಲಾವಿದರಾಗಿ ಬಾಳಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು’ ಎಂದು ಸಾಹಿತಿ ಶ್ರೀಪಾದ ಶೆಟ್ಟಿ ಹೇಳಿದರು.
ದಿ.ಕಲಭಾಗದ ಗೋವಿಂದ ಹೆಗಡೆ ಜನ್ಮಶತಮಾನೋತ್ಸವ ಸಮಿತಿ ಮತ್ತು ಕಲಭಾಗ ಕುಟುಂಬ ಆಯೋಜಿಸಿದ್ದ ದಿ.ಕಲಭಾಗ ಗೋವಿಂದ ಹೆಗಡೆ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೆಂಕಟೇಶ ಗೌಡ ನೀಲ್ಕೋಡ, ದೇವು ಮರಾಠಿ ತೊಳಸಾಣಿ (ಕೃಷಿ ), ಕಟ್ಟೆ ಗಜಾನನ ಹೆಗಡೆ (ವೀಳ್ಯದೆಲೆ ವ್ಯಾಪಾರ )ನೀಲಕಂಠ ಜೈನ್ ಅರೆಅಂಗಡಿ (ವಾಹನ ಚಾಲನೆ ), ವಿ.ಎಸ್. ಭಟ್ಟ ನವಿಲಗೋಣ (ನಾಟಕ ), ವಿ.ಎನ್. ಭಟ್ಟ ಅಳ್ಳಂಕಿ (ಸಹಕಾರ ), ತಾರಾ ಜಿ. ಭಟ್ಟ (ಭಜನೆ,)ಸುಬ್ರಾಯ ಭಾಗವತ ಕಪ್ಪೆಕೆರೆ (ಯಕ್ಷಗಾನ ), ಸುಬ್ರಹ್ಮಣ್ಯ ಭಟ್ಟ ಮೇಲಿನಗಂಟಿಗೆ (ಸಾಮಾವೇದ ), ಪಂ. ಗಣಪತಿ ಭಟ್ಟ ಹಾಸಣಗಿ (ಶಾಸ್ತ್ರೀಯ ಸಂಗೀತ ) ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಎಂ. ಗಣಪತಿ ಮಾತನಾಡಿದರು. ಪತ್ರಕರ್ತ ಜಿ.ಯು. ಭಟ್ ಮಾತನಾಡಿದರು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ವಿಷ್ಣು ಭಟ್ಟ, ಗಾಯಕ ಪರಮೇಶ್ವರ ಹೆಗಡೆ ಕಲಭಾಗ ಭಾಗವಹಿಸಿದ್ದರು. ಜಿ.ಆರ್. ಹೆಗಡೆ ಗುಬ್ಬು ಸ್ವಾಗತಿಸಿದರು. ನಾಗರಾಜ ಹೆಗಡೆ ಖಾಸಕಂಡ ನಿರೂಪಿಸಿದರು. ಕಲಭಾಗ ಕುಟುಂಬದ ಕಲಾವಿದರು, ಪಂ. ಗಣಪತಿ ಭಟ್ಟ ಹಾಸಣಗಿ ಅವರ ಗಾಯನ ಹಾಗೂ ಶ್ರೀಕೃಷ್ಣ ಸಂಧಾನ ಪ್ರಸಂದ ಯಕ್ಷಗಾನ ಪ್ರದರ್ಶನ ಪ್ರೇಕ್ಷರಿಗೆ ಮುದ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.