ADVERTISEMENT

ಹೊನ್ನಾವರ: ವಂಚನೆ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 7:08 IST
Last Updated 19 ಫೆಬ್ರುವರಿ 2026, 7:08 IST
ರವೀಶ್ ಹೆಗಡೆ
ರವೀಶ್ ಹೆಗಡೆ   

ಹೊನ್ನಾವರ: ಕಾರು ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಆರೋಪಿಯೊಬ್ಬನನ್ನು ಇಲ್ಲಿನ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ಶಿರಸಿ ತಾಲ್ಲೂಕಿನ ಅಜ್ಜಿಬಾಳ ಸೊಂಡ್ಲೆಬೈಲು ನಿವಾಸಿ ರವೀಶ್ ವೆಂಕಟರಮಣ ಹೆಗಡೆ (27) ಬಂಧಿತ ಆರೋಪಿ. ಕಾರು ಕೊಡಿಸುತ್ತೇನೆ ಎಂದು ಹೇಳಿ ₹ 5.55 ಲಕ್ಷ ಪಡೆದು ವಂಚಿಸಿದ್ದಾನೆ' ಎಂದು ತಾಲ್ಲೂಕಿನ ಹೊಸಾಕುಳಿಯ ಎಚ್.ಆರ್.ಗಣೇಶ ಎನ್ನುವವರು ರವೀಶ್ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿ ರವೀಶ್ ಜಿಲ್ಲೆ ಹಾಗೂ ಇತರೆಡೆ ನಡೆದಿರುವ ಹಲವು ಮೋಸದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆರೋಪಿ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಹಾಗೂ ಬೆಂಗಳೂರಿನಲ್ಲಿ 1 ಪ್ರಕರಣ ದಾಖಲಾಗಿವೆ' ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.