ADVERTISEMENT

ಹೊರಟ್ಟಿ ನನಗೆ ಸ್ಪರ್ಧಿಯೇ ಅಲ್ಲ: ಕರಬಸಪ್ಪ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 14:49 IST
Last Updated 8 ಜೂನ್ 2022, 14:49 IST
ಎಂ.ಪಿ.ಕರಬಸಪ್ಪ
ಎಂ.ಪಿ.ಕರಬಸಪ್ಪ   

ಕಾರವಾರ: ‘ಬಸವರಾಜ ಹೊರಟ್ಟಿ ಅವರು ನನಗೆ ಸ್ಪರ್ಧಿಯೇ ಅಲ್ಲ. ಜೆ.ಡಿ.ಎಸ್.ನಿಂದ ಸ್ಪರ್ಧಿಸಿದ್ದರೆ ಸೋಲುವ ಭೀತಿಯಿಂದ ಬಿ.ಜೆ.ಪಿ.ಗೆ ಪಕ್ಷಾಂತರ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರು ಬದಲಾವಣೆ ಬಯಸಿದ್ದು, ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ’ ಎಂದು ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಕರಬಸಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು 34 ವರ್ಷಗಳಿಂದ ಶಿಕ್ಷಕರ ಸಂಘಟನೆಯಂಥ ಸೇವೆಯಲ್ಲಿದ್ದೇನೆ. ಈಗಾಗಲೇ ಹಾವೇರಿ, ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ಅಲ್ಲೆಲ್ಲ ಶಿಕ್ಷಕರು ಈ ಬಾರಿ ಪ್ರತಿನಿಧಿಯ ಬದಲಾವಣೆಯ ಆಶಯ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಿಂದ ಆಯ್ಕೆಯಾದವರಿಂದ ಏನೂ ಕೆಲಸಗಳಾಗಿಲ್ಲ ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ’ ಎಂದರು.

ಪ್ರಮುಖ ಬಸವರಾಜ ಕಾಡಪ್ಪನವರ ಮಾತನಾಡಿ, ‘ಶಿಕ್ಷಕರ ಸಮಸ್ಯೆಗಳು ಇನ್ನೂ ಹಾಗೇ ಇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಚರ್ಚೆಸಿ ನಂತರ ಮರೆಯುತ್ತಾರೆ ಎಂಬ ಬೇಸರ ಶಿಕ್ಷಕರಲ್ಲಿದೆ. ಕರಬಸಪ್ಪ ಅವರನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

ಪ್ರಮುಖರಾದ ಚನ್ನಬಸಪ್ಪ ಮಧ್ಯಾನ್ನದ, ರಮೇಶ ಗೋಣಿಗೇರ, ಸಚಿನ್ ದೊಡ್ಮನಿ, ನಿಜಗುಣ ಗಡಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.