ದಾಂಡೇಲಿ: ಬೈಯಲಪಾರಿನ ಐ.ಪಿ.ಎಂ ಗೇಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸೋಲಾಪುರ ನಿವಾಸಿ ವಾಸಿಮ್ ಇಸಾಕ ಮುಜಾವರ (27), ದಾಂಡೇಲಿಯ ಸುಭಾಸ ನಗರದ ನಿವಾಸಿ ಶಾನವಾಜ ಇಮ್ತಿಯಾಜ ಶೇಖ (22) ಬಂಧಿತ ಆರೋಪಿಗಳಾಗಿದ್ದು, ಅವರಿಂದ ₹60,000 ಮೌಲ್ಯದ 1ಕೆ.ಜಿ 198 ಗ್ರಾಂ ಗಾಂಜಾ ಹಾಗೂ ಮಾರಾಟ ಮಾಡಿ ಬಂದ ನಗದು ₹550 ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.