ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ತುಳಸಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 12:46 IST
Last Updated 6 ಜೂನ್ 2022, 12:46 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಪ್ರಮಾಣ ಪತ್ರ, ಪದಕದೊಂದಿಗೆ ಬಾಲ ಕಲಾವಿದೆ ತುಳಸಿ ರಾಘವೇಂದ್ರ ಹೆಗಡೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಪ್ರಮಾಣ ಪತ್ರ, ಪದಕದೊಂದಿಗೆ ಬಾಲ ಕಲಾವಿದೆ ತುಳಸಿ ರಾಘವೇಂದ್ರ ಹೆಗಡೆ.   

ಶಿರಸಿ: ಯಕ್ಷನೃತ್ಯ ರೂಪಕದ ಮೂಲಕ ವಿಶ್ವಶಾಂತಿ ಸಂದೇಶ ಸಾರುತ್ತಿರುವ ಬಾಲ ಕಲಾವಿದೆ, ತಾಲ್ಲೂಕಿನಬೆಟ್ಟಕೊಪ್ಪದ ತುಳಸಿರಾಘವೇಂದ್ರಹೆಗಡೆಇಂಡಿಯಾಬುಕ್ಆಫ್ರೆಕಾರ್ಡ್‍ಗೆಸೇರ್ಪಡೆಗೊಂಡಿದ್ದಾಳೆ.

ಕಳೆದ ಏಳು ವರ್ಷಗಳಿಂದ ನಿರಂತರ ವಿಶ್ವಶಾಂತಿ ಸಂದೇಶ ಸಾರುವ ಯಕ್ಷನೃತ್ಯ ರೂಪಕ ಪ್ರದರ್ಶಿಸುತ್ತಿರುವ ಸಾಧನೆಯನ್ನು ಇಂಡಿಯಾ ಬುಕ್ ರೆಕಾರ್ಡ್ ದಾಖಲಿಸಿಕೊಂಡಿದೆ. ಈ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ಕಲಾ ಪ್ರದರ್ಶನ ನೀಡುವ ದೇಶದ ಏಕೈಕ ಬಾಲೆ ಎಂಬುದು ಈಗ ಅಧಿಕೃತವಾಗಿ ಋಜುವಾತಾಗಿದೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ತುಳಸಿ ಹೆಗಡೆಯು ಒಂದು ಗಂಟೆಗೂ ಅಧಿಕ ಕಾಲದ ಯಕ್ಷನೃತ್ಯ ರೂಪಕವನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. 13ರ ಹರೆಯದ ತುಳಸಿ ಕಳೆದ ಏಳು ವರ್ಷಗಳಿಂದ ವಿವಿಧ ಪೌರಾಣಿಕ ಕಥೆ ಒಳಗೊಂಡ ವಿಶ್ವಶಾಂತಿ ಸರಣಿ ಪ್ರಸ್ತುತಗೊಳಿಸಿ ಪ್ರಸಿದ್ಧಿ ಪಡೆದಿದ್ದಾಳೆ.

ADVERTISEMENT

‘ಕಿರಿಯ ವಯಸ್ಸಿನಿಂದ ವಿಶ್ವಶಾಂತಿ ಸರಣಿ ಸಂದೇಶ ಸಾರುವ ಬಾಲ ಯಕ್ಷಗಾನ ಕಲಾವಿದೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ ನೀಡುವ ಪ್ರಮಾಣ ಪತ್ರದಲ್ಲೂ ಉಲ್ಲೇಖಿಸಿದೆ. ಕಳೆದ ಏ.27 ರಂದು ದಾಖಲೀಕರಿಸಿಕೊಂಡ ಸಂಸ್ಥೆ ಯಕ್ಷಗಾನ ಕಲಾ ಮಾಧ್ಯಮದ ಮೂಲಕ ಜಗತ್ತಿನ ಯೋಗಕ್ಷೇಮದ ಪ್ರಸ್ತುತಿಗಾಗಿ ರೂಪಕ ಪ್ರದರ್ಶಿಸುತ್ತಿರುವುದು ಹೆಮ್ಮೆ ಎಂದು ತಿಳಿಸಿದೆ’ ಎಂದು ತುಳಸಿ ತಾಯಿ ಗಾಯತ್ರಿ ರಾಘವೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.