ADVERTISEMENT

ನೌಕಾನೆಲೆಯಲ್ಲಿ ‘ಸ್ವಾತಂತ್ರ್ಯ ಸುವರ್ಣ ಮಹೋತ್ಸವ’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 14:22 IST
Last Updated 11 ಆಗಸ್ಟ್ 2021, 14:22 IST
‘ಸ್ವಾತಂತ್ರ್ಯದ ಸುವರ್ಣ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ಕಾರವಾರದ ನೌಕಾನೆಲೆಯ ಸಿಬ್ಬಂದಿ ಕಡಲ ತೀರವನ್ನು ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಸಂಗ್ರಹಿಸಿದರು
‘ಸ್ವಾತಂತ್ರ್ಯದ ಸುವರ್ಣ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ಕಾರವಾರದ ನೌಕಾನೆಲೆಯ ಸಿಬ್ಬಂದಿ ಕಡಲ ತೀರವನ್ನು ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಸಂಗ್ರಹಿಸಿದರು   

ಕಾರವಾರ: ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಭಾಗವಾಗಿ ಭಾರತೀಯ ನೌಕಾದಳವು ‘ಸೀಬರ್ಡ್’ ನೌಕಾನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ಯುದ್ಧ ವಿಮಾನ ವಾಹಕ ನೌಕೆ ‘ಐ.ಎನ್.ಎಸ್ ವಿಕ್ರಮಾದಿತ್ಯ’ದ 75 ಸಿಬ್ಬಂದಿ, ದೃಷ್ಟಿ ಮತ್ತು ಶ್ರವಣ ದೋಷ ಇರುವ ಮಕ್ಕಳ ‘ಆಶಾ ನಿಕೇತನ’ ಶಾಲೆಗೆ ಭೇಟಿ ನೀಡಿ ಶ್ರಮದಾನದ ಮೂಲಕ ಬಣ್ಣ ಬಳಿದು ಸುಂದರಗೊಳಿಸಿದರು. ಅನಾಥಾಶ್ರಮಗಳಲ್ಲಿ, ಕಡಲತೀರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ, 75 ಸಿಬ್ಬಂದಿಯಿಂದ ರಕ್ತದಾನವನ್ನೂ ಹಮ್ಮಿಕೊಳ್ಳಲಾಯಿತು.

ಸಮಾಜದಲ್ಲಿ ನೆರವಿನ ನಿರೀಕ್ಷೆಯಲ್ಲಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಅಗತ್ಯ ಸಲಕರಣೆಗಳನ್ನು ನೀಡಲಾಯಿತು. ಇದೇ ರೀತಿ, ಏಳೂವರೆ ಕಿಲೋಮೀಟರ್ ಉದ್ದದ ಕಡಲತೀರವನ್ನು 75 ಸಿಬ್ಬಂದಿ ಸ್ವಚ್ಛಗೊಳಿಸಿ 75 ಸಸಿಗಳನ್ನು ನೆಟ್ಟರು. ‘ಸ್ವಸ್ಥ ಭಾರತ’ ಅಭಿಯಾನದ ಭಾಗವಾಗಿ 750 ಸಿಬ್ಬಂದಿ ಏಳೂವರೆ ಕಿಲೋಮೀಟರ್ ಓಟದಲ್ಲಿ ಭಾಗವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.