ADVERTISEMENT

‘ಜಾಕ್ ಫ್ರುಟ್ ಎಕ್ಲೇರ್ಸ್’ ಮಾರುಕಟ್ಟೆಗೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 14:53 IST
Last Updated 21 ಜುಲೈ 2021, 14:53 IST
ಕ್ಯಾಂಪ್ಕೊ ಸಂಸ್ಥೆ ಹಲಸಿನ ಹಣ್ಣಿನಿಂದ ತಯಾರಿಸಿದ ‘ಜಾಕ್ ಫ್ರುಟ್ ಎಕ್ಲೇರ್ಸ್’ ಚಾಕೊಲೆಟ್‍ನ್ನು ಬುಧವಾರ ಶಿರಸಿಯ ಪ್ರಾದೇಶಿಕ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಯಾಂಪ್ಕೊ ಸಂಸ್ಥೆ ಹಲಸಿನ ಹಣ್ಣಿನಿಂದ ತಯಾರಿಸಿದ ‘ಜಾಕ್ ಫ್ರುಟ್ ಎಕ್ಲೇರ್ಸ್’ ಚಾಕೊಲೆಟ್‍ನ್ನು ಬುಧವಾರ ಶಿರಸಿಯ ಪ್ರಾದೇಶಿಕ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.   

ಶಿರಸಿ: ಹಲಸಿನ ಹಣ್ಣಿನಿಂದ ತಯಾರಿಸಿದ ‘ಜಾಕ್ ಫ್ರುಟ್ ಎಕ್ಲೇರ್ಸ್’ ಚಾಕೊಲೆಟ್‍ನ್ನು ಕ್ಯಾಂಪ್ಕೊ ಸಂಸ್ಥೆ ಬುಧವಾರ ಮಾರುಕಟ್ಟೆಗೆ ಪರಿಚಯಿಸಿದೆ.

ನಗರದಲ್ಲಿರುವ ಕ್ಯಾಂಪ್ಕೊ ಪ್ರಾದೇಶಿಕ ಕಚೇರಿಯಲ್ಲಿ ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗಡೆ ಚಾಕೊಲೆಟ್ ಬಿಡುಗಡೆಗೊಳಿಸಿದರು. ‘ರೈತರ ಹಿತಕಾಯುವ ಉದ್ದೇಶಕ್ಕೆ ಸ್ಥಾಪಿತವಾದ ಸಂಸ್ಥೆ ಪರಿಸ್ಥಿತಿಗೆ ತಕ್ಕಂತೆ ಸುಧಾರಣೆ ಕಾಣುತ್ತಿದೆ. ಅಡಿಕೆ, ರಬ್ಬರ್, ಕೋಕೊ, ಕಾಳುಮೆಣಸು ಬೆಳೆಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗಿತ್ತು. ಈಗ ಹಣ್ಣುಗಳಿಗೂ ಆದ್ಯತೆ ನೀಡಿ ಉತ್ಪನ್ನ ಸಿದ್ಧಗೊಳ್ಳುತ್ತಿದೆ’ ಎಂದರು.

‘ಮುಂಬರುವ ದಿನದಲ್ಲಿ ಬೆಲ್ಲ, ಆಯುರ್ವೇದಿಕ್ ಗುಣದ ವಸ್ತುಗಳಿಂದ ಚಾಕೊಲೆಟ್ ತಯಾರಿಸುವ ಚಿಂತನೆ ಸಂಸ್ಥೆ ಹೊಂದಿದೆ’ ಎಂದರು.

ADVERTISEMENT

‘ಈಗಾಗಲೆ ಸಂಸ್ಥೇಯಿಂದ 24 ಬಗೆಯ ಚಾಕೊಲೆಟ್‍ನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈಗ ಹಲಸಿನ ಹಣ್ಣು ಬಳಸಿ ತಯಾರಿಸಿದ್ದೇವೆ. ಪ್ರತಿ ಚಾಕೊಲೆಟ್ ದರ ₹2 ಆಗಿದೆ’ ಎಂದು ಸಂಸ್ಥೆಯ ಪ್ರದೇಶ ಮಾರುಕಟ್ಟೆ ವ್ಯವಸ್ಥಾಪಕ ಶಿವಮಾದ ನಾಯಕ ಹೇಳಿದರು.

ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಭರತ ಭಟ್, ಶಿರಸಿ ಭಾಗದ ವಿತರಕ ಗಜಾನನ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.