ADVERTISEMENT

ಸೆ.3- 9ರವರೆಗೆ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಸಾತೇರಿಯ ದೇವಸ್ಥಾನ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:06 IST
Last Updated 1 ಸೆಪ್ಟೆಂಬರ್ 2022, 16:06 IST
ಕಾರವಾರ ತಾಲ್ಲೂಕಿನ ಹಣಕೋಣದ ಸಾತೇರಿ ದೇವಿ ದೇಗುಲ
ಕಾರವಾರ ತಾಲ್ಲೂಕಿನ ಹಣಕೋಣದ ಸಾತೇರಿ ದೇವಿ ದೇಗುಲ   

ಕಾರವಾರ: ತಾಲ್ಲೂಕಿನ ಹಣಕೋಣದ ಸಾತೇರಿ ದೇವಿಯ ವಾರ್ಷಿಕ ಉತ್ಸವವು ಸೆ.3ರಿಂದ 9ರವರೆಗೆ ನೆರವೇರಲಿದೆ.

ಈ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಸೆ.3ರಂದು ಮಧ್ಯರಾತ್ರಿ 12ಕ್ಕೆ ಬಾಗಿಲು ತೆರೆದು, ದೇವಿಗೆ ‘ನವೆ’ ಅರ್ಪಿಸಲಾಗುತ್ತದೆ. ಊರು, ಪರ ಊರಿನ ಭಕ್ತರು ಸೆ.5ರಿಂದ ಸೆ.9ರ ಸಂಜೆ 4ರ ತನಕ ದೇವಿಯ ದರ್ಶನ ಪಡೆದು ಹರಕೆ ಒಪ್ಪಿಸಬಹುದು.

ಸೆ.4ರಂದು ಇಡೀ ದಿನ ಹಾಗೂ ಸೆ.9ರಂದು ಸಂಜೆ 4ರ ನಂತರ ಭಕ್ತರ ಸೇವೆಗಳನ್ನು ಸ್ವೀಕರಿಸುವುದಿಲ್ಲ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.