ADVERTISEMENT

ಜೊಯಿಡಾ: ಶಾಸಕರ ಲಿಖಿತ ಭರವಸೆ, ಪಾದಯಾತ್ರೆ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 4:46 IST
Last Updated 17 ಡಿಸೆಂಬರ್ 2025, 4:46 IST
ಜೊಯಿಡಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಶಾಸಕ ಆರ್.ವಿ.ದೇಶಪಾಂಡೆ ನೀಡಿದ ಲಿಖಿತ ಭರವಸೆಯನ್ನು ತಹಶೀಲ್ದಾರ್ ಮಂಜುನಾಥ್ ಮೂನ್ನೊಳ್ಳಿ ಪ್ರತಿಭಟನಾಕಾರರಿಗೆ ನೀಡಿದರು
ಜೊಯಿಡಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಶಾಸಕ ಆರ್.ವಿ.ದೇಶಪಾಂಡೆ ನೀಡಿದ ಲಿಖಿತ ಭರವಸೆಯನ್ನು ತಹಶೀಲ್ದಾರ್ ಮಂಜುನಾಥ್ ಮೂನ್ನೊಳ್ಳಿ ಪ್ರತಿಭಟನಾಕಾರರಿಗೆ ನೀಡಿದರು   

ಜೊಯಿಡಾ: ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಕೇಂದ್ರದಿಂದ ಹಳಿಯಾಳ ಶಾಸಕರ ಕಚೇರಿಯವರೆಗೆ ಮಂಗಳವಾರ ಆರಂಭಗೊಂಡ ಪಾದಯಾತ್ರೆಯು, ಶಾಸಕರ ಭರವಸೆಯ ಮೇರೆಗೆ ಮೊಟಕುಗೊಂಡಿತು.  

ಜೊಯಿಡಾ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

ಮಂಗಳವಾರ ಜೊಯಿಡಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಟಿ.ಯಶವಂತ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಡಿ.20 ರಂದು ಹಳಿಯಾಳದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಸುವುದಾಗಿ ಶಾಸಕ ಆರ್‌.ವಿ. ದೇಶಪಾಂಡೆ ಅವರು ಲಿಖಿತ ಭರವಸೆಯನ್ನು ತಹಶೀಲ್ದಾರ್ ಮೂಲಕ ನೀಡಿದರು. ಪಾದಯಾತ್ರೆಯನ್ನು ಹಿಂದಕ್ಕೆ ಪಡೆಯಲಾಯಿತು.

ADVERTISEMENT

ತಹಶೀಲ್ದಾರ್ ಕಚೇರಿಯಿಂದ ಶಿವಾಜಿ ವೃತ್ತದವರೆಗೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಅನೇಕ ಬೇಡಿಕೆಗಳನ್ನು ಪೂರೈಸಲು ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ ಯಶವಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಸಿಐಟಿಯು ಕಾರ್ಯದರ್ಶಿ ಯಮುನಾ ಗಾಂವ್ಕರ್, ತಾಲ್ಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಉಮೇಶ್ ವೇಳಿಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.