ADVERTISEMENT

ಶಿರಸಿ ನಿಸರ್ಗ ಮನೆಯಲ್ಲಿ ಜ್ಯೋತಿರಾಜ್ !

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:30 IST
Last Updated 1 ಮಾರ್ಚ್ 2020, 19:30 IST
ಶಿರಸಿಯ ಏಕಲವ್ಯ ಡಾನ್ಸ್‌ಗ್ರೂಪ್ ಕಾರ್ಯಕ್ರಮದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿದ ಜ್ಯೋತಿರಾಜ್ (ಬಲದಿಂದ ಮೊದಲನೆಯವರು)
ಶಿರಸಿಯ ಏಕಲವ್ಯ ಡಾನ್ಸ್‌ಗ್ರೂಪ್ ಕಾರ್ಯಕ್ರಮದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿದ ಜ್ಯೋತಿರಾಜ್ (ಬಲದಿಂದ ಮೊದಲನೆಯವರು)   

ಶಿರಸಿ: ತೂಕ ಇಳಿಸಿಕೊಳ್ಳಲು ಬಂದಿರುವ ಸಾಹಸಿ ಕೋಟೆನಗರಿಯ ಜ್ಯೋತಿರಾಜ್ ಅವರು ಒಂದು ತಿಂಗಳಿನಿಂದ ಇಲ್ಲಿನ ನಿಸರ್ಗ ಮನೆಯಲ್ಲಿ ತಂಗಿದ್ದಾರೆ. ಡಾ. ವೆಂಕಟರಮಣ ಹೆಗಡೆ ಅವರ ಈ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜೋತಿರಾಜ್ ಅವರು ಏಂಜಲ್ ಜಲಪಾತ ಹತ್ತುವ ಬಯಕೆಯಿಂದ ತೂಕ ಇಳಿಸಿಕೊಳ್ಳಲು ಇಲ್ಲಿ ದಾಖಲಾಗಿದ್ದಾರೆ. ಡಾ. ಪ್ರವೀಣ ಜೇಕಬ್ ಮಾರ್ಗದರ್ಶನದಲ್ಲಿ ಅವರಿಗೆ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಅವರ ತೂಕವೂ ಇಳಿದಿದೆ’ ಎಂದು ಡಾ.ವೆಂಕಟರಮಣ ಹೆಗಡೆ ‘ಪ್ರಜಾವಾಣಿ’ ಪ್ರತಿಕ್ರಿಯಿಸಿದರು.

ಶನಿವಾರ ಇಲ್ಲಿ ನಡೆದ ಏಕಲವ್ಯ ಡಾನ್ಸ್‌ಗ್ರೂಪ್‌ನ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಅವರಿಗೆ, ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ADVERTISEMENT

ಅವರು ಜಲಪಾತವೊಂದನ್ನು ಹತ್ತುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ವೆನೆಜುವೆಲಾದ ಏಂಜಲ್ ಜಲಪಾತವಾಗಿದ್ದು, ಎರಡು ದಿನಗಳ ಹಿಂದಷ್ಟೇ ಜ್ಯೋತಿರಾಜ್ ಅದನ್ನು ಹತ್ತುತ್ತಿರುವ ವಿಡಿಯೊ ಎಂಬ ಸಂದೇಶವೂ ಇದರ ಜೊತೆ ಓಡಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.