ಶಿವರಾಮ ಹೆಬ್ಬಾರ
ಶಿರಸಿ: ‘ತಾಲ್ಲೂಕಿನ ಬನವಾಸಿಯಲ್ಲಿ ಏಪ್ರಿಲ್ 12 ಮತ್ತು 13ರಂದು ಕದಂಬೋತ್ಸವ ನಡೆಯಲಿದ್ದು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆಯಲಿವೆ’ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
‘ಏಪ್ರಿಲ್ 10ರಂದು ಗುಡ್ನಾಪುರ ರಾಣಿ ನಿವಾಸದಲ್ಲಿ ಕದಂಬ ಜ್ಯೋತಿಗೆ ಚಾಲನೆ ಸಿಗಲಿದ್ದು, ಗುಡ್ನಾಪುರ ಉತ್ಸವ ಕೂಡ ನಡೆಯಲಿದೆ. ಎರಡು ದಿನ ವಿವಿಧೆಡೆ ಸಂಚರಿಸಿ, ಬನವಾಸಿಗೆ ಬರುವ ಕದಂಬ ಜ್ಯೋತಿಯಿಂದ ಕದಂಬೋತ್ಸವವನ್ನು ಮುಖ್ಯಮಂತ್ರಿಯವರು ಉದ್ಘಾಟಿಸುವರು. ಸಾಹಿತಿ ಬಿ.ಎ.ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಕದಂಬೋತ್ಸವವನ್ನು ಮನೆ ಹಬ್ಬದಂತೆ ಎಲ್ಲರೂ ಆಚರಿಸಬೇಕು’ ಎಂದರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.