ADVERTISEMENT

ಶಿರಸಿ | ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯನ್ನು ಸರ್ಕಾರ ಕೈಬಿಡಲಿ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 17:44 IST
Last Updated 12 ಜನವರಿ 2026, 17:44 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ‘ಬೇಡ್ತಿ–ವರದಾ ನದಿ ಜೋಡಣೆ ಸಂಬಂಧ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ತೋರುತ್ತಿರುವ ಉತ್ಸುಕತೆ ನಿಲ್ಲಿಸಿ, ಯೋಜನೆ ಕೈಬಿಡಲು ಸಿ.ಎಂ., ಡಿಸಿಎಂ ಮುಂದಾಗಬೇಕು’ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಒತ್ತಾಯಿಸಿದರು.
‘ರಾಜ್ಯ ಸರ್ಕಾರ ಯೋಜನೆ ಬೇಡ ಎಂದರೆ ಈಗಲೂ ಕೇಂದ್ರ ಸರ್ಕಾರ ಯೋಜನೆ ಹೇರುವುದಿಲ್ಲ. 30 ವರ್ಷದಿಂದ ಚರ್ಚೆ ಆಗದ್ದು, ಈ ಎರಡೂವರೆ ವರ್ಷದಲ್ಲಿ ಏಕೆ ಮುನ್ನೆಲೆಗೆ ಬಂದಿದೆ’ ಎಂದು ಪ್ರಶ್ನಿಸಿದರು.

ಪತ್ರಕರ್ತರ ಜತೆ ಮಾತನಾಡಿದ ಅವರು, ‘ವೈಜ್ಞಾನಿಕ ಕಾರಣ ಹಾಗೂ ಅನುಭವದ ಆಧಾರದಲ್ಲಿ ನದಿ ಜೋಡಣೆ ಯೋಜನೆ ನಮಗೆ ಬೇಡ. ಬೃಹತ್ ಯೋಜನೆಯಿಂದ ಭೂ ಕುಸಿತ ಉಂಟಾಗುತ್ತಿದೆ. ಜಿಲ್ಲೆಯ ಜನರು ಒಟ್ಟಾಗಿ ಈ ಯೋಜನೆ ಬೇಡ ಎಂದು ವಿರೋಧಿಸುತ್ತಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.

‘ಜಿಲ್ಲೆಗೆ ಭೇಟಿ ನೀಡಿದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ಯೋಜನೆ ಮಾಡುತ್ತೇವೆ  ಎಂದು ಹೇಳಿದಾಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಏಕೆ ವಿರೋಧ ವ್ಯಕ್ತ
ಪಡಿಸಲಿಲ್ಲ? ಎಂದು ಕಿಡಿಕಾರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.