ADVERTISEMENT

SSLC Result 2022 | ಶಿರಸಿ; ಪೂರ್ಣಾಂಕದ ಸಾಧನೆ ಮೆರೆದ ಕನ್ನಿಕಾ

​ಪ್ರಜಾವಾಣಿ ವಾರ್ತೆ
Published 19 ಮೇ 2022, 9:45 IST
Last Updated 19 ಮೇ 2022, 9:45 IST
ತಂದೆ ಹಾಗೂ ತಾಯಿ ಜತೆ ಬಿಸಲಕೊಪ್ಪದ ಕನ್ನಿಕಾಪರಮೇಶ್ವರಿ ಹೆಗಡೆ
ತಂದೆ ಹಾಗೂ ತಾಯಿ ಜತೆ ಬಿಸಲಕೊಪ್ಪದ ಕನ್ನಿಕಾಪರಮೇಶ್ವರಿ ಹೆಗಡೆ   

ಶಿರಸಿ: ತಾಲ್ಲೂಕಿನ ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿನಿ ಕನ್ನಿಕಾಪರಮೇಶ್ವರಿ ಹೆಗಡೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕದ ಸಾಧನೆ ಮಾಡಿ ರಾಜ್ಯಕ್ಕೆ ಟಾಪರ್ ಎನಿಸಿದ್ದಾಳೆ.

ಬಿಸಲಕೊಪ್ಪ ಗ್ರಾಮದ ಬಡ ಕುಟುಂಬದ ರಾಮಚಂದ್ರ ಹೆಗಡೆ ಹಾಗೂ ಸುಜಾತಾ ದಂಪತಿಯ ಪುತ್ರಿ.

'ಪಾಲಕರ ಪ್ರೋತ್ಸಾಹವೇ ನನಗೆ ಈ ಸಾಧನೆ ಮಾಡಲು ಪ್ರೇರಣೆ. ಶಾಲೆಯಲ್ಲೇ ಹೇಳಿಕೊಟ್ಟ ಪಾಠ ಸಾಕಾಯಿತು. ಟ್ಯೂಷನ್ ಅಗತ್ಯವೂ ಬೀಳಲಿಲ್ಲ. ಆನ್‌ಲೈನ್ ಕಲಿಕೆ ಇದ್ದರೂ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ವೇಳಾಪಟ್ಟಿ ರೂಪಿಸಿಕೊಟ್ಟಿದ್ದರು' ಎಂದು ಕನ್ನಿಕಾ ಪ್ರತಿಕ್ರಿಯಿಸಿದರು.

ADVERTISEMENT

'ಪಿಯುಸಿಯಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡುವ ಬಯಕೆ ಇದೆ. ಎಂಜಿನಿಯರಿಂಗ್ ಮಾಡಬೇಕು ಎಂಬುದು ಗುರಿ' ಎಂದರು.

'ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬರು ಈ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿ. ಇದು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ' ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಂ.ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.