ADVERTISEMENT

ಕಾರವಾರ: ಶಿವರಾತ್ರಿ ಅಂಗವಾಗಿ ಸಮುದ್ರ ಸ್ನಾನ ಮಾಡುವಾಗ ಮುಳುಗಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:15 IST
Last Updated 17 ಫೆಬ್ರುವರಿ 2026, 6:15 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಾರವಾರ: ತಾಲ್ಲೂಕಿನ ಬಾವಳ ಸಮೀಪ ಸಮುದ್ರದಲ್ಲಿ ಮುಳುಗಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮಾಜಾಳಿ ಗಾಂವಗೇರಿಯ ಯಶ್ ಶ್ಯಾಮ ಮಹಾಲೆ (17) ಮೃತ. ಶಿವರಾತ್ರಿ ಅಂಗವಾಗಿ ನಡೆಯುವ ಸಮುದ್ರ ಸ್ನಾನದಲ್ಲಿ ಪಾಲ್ಗೊಂಡ ವೇಳೆ ಈ ಅವಘಡ ಸಂಭವಿಸಿದೆ.

ADVERTISEMENT

ನೂರಾರು ಜನರು ಸಮುದ್ರ ಸ್ನಾನ ಮಾಡುತ್ತಿದ್ದರು. ಈ ವೇಳೆ ಆಯತಪ್ಪಿ ಮುಳುಗಿದ ಬಾಲಕ ಉಸಿರುಗಟ್ಟಿ ಸತ್ತಿದ್ದಾನೆ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.