
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಕಾರವಾರ: ಆನ್‌ಲೈನ್ ಶಾಪಿಂಗ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ₹1.37 ಲಕ್ಷ ವಂಚಿಸಿದ್ದಾಗಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದಗಾದ ಸೀಬರ್ಡ್ ಕಾಲೊನಿಯ ಸಚಿನ್ ದುರ್ಗೇಕರ ವಂಚನೆಗೆ ಒಳಗಾದವರು. ಅ.25ರಂದು ಆನ್‍ಲೈನ್ ಮೂಲಕ ವಸ್ತುವೊಂದನ್ನು ಖರೀದಿಸಿದ್ದ ಅವರಿಗೆ ಕೆಲ ದಿನಗಳ ಬಳಿಕ ಖರೀದಿಗೆ ವಿಶೇಷ ಉಡುಗೊರೆ ಇದೆ ಎಂದು ನಂಬಿಸಿದ್ದ ವಂಚಕರು ಲಿಂಕ್ ಕಳಿಸಿದ್ದರು. ಅದರಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಭರಿಸಲು ಸೂಚಿಸಿದ್ದರು. ಇದನ್ನು ನಂಬಿದ ಸಚಿನ್ ವಂಚಕರ ಸೂಚನೆ ಪಾಲಿಸಿದ್ದರು. ಅವರ ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳಿಂದ ಹಣ ಅಪರಿಚಿತರ ಖಾತೆಗೆ ವರ್ಗಾವಣೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.