ADVERTISEMENT

ಕಾರವಾರ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:47 IST
Last Updated 23 ಜನವರಿ 2026, 6:47 IST
   

ಕಾರವಾರ: ಇಲ್ಲಿನ ಪಿಕಳೆ ನರ್ಸಿಂಗ್ ಹೋಮ್‌ನ ಔಷಧ ವಿಭಾಗ ನಿಭಾಯಿಸುತ್ತಿದ್ದ ರಾಜೀವ ಪಿಕಳೆ (70) ಶುಕ್ರವಾರ ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿನ ತಮ್ಮ ಮನೆ ಆವರಣದಲ್ಲಿ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯ ಹೊರ ಆವರಣದ ತುಳಸಿ ಕಟ್ಟೆಯ ಬಳಿ ಕುಳಿತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ‌.

ADVERTISEMENT

ಪಿಕಳೆ ಕುಟುಂಬದ ಒಡೆತನದ ನರ್ಸಿಂಗ್ ಹೋಮ್‌ನ ಔಷಧ ವಿಭಾಗವನ್ನು ಹಲವು ವರ್ಷಗಳಿಂದ ಅವರು ಮುನ್ನಡೆಸುತ್ತಿದ್ದರು. ಈಚೆಗಷ್ಟೆ ಅವಧಿ ಮೀರಿದ ಔಷಧವೊಂದನ್ನು ರೋಗಿಯೊಬ್ಬರಿಗೆ ನೀಡಿದ್ದರು ಎಂದು ಆರೋಪಿಸಿ, ವ್ಯಕ್ತಿಯೊಬ್ಬರು ರಾಜೀವ ಅವರ ಜೊತೆ ವಾಗ್ವಾದ ನಡೆಸಿದ್ದರು. ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.