ಮುರಿದ ಕಾಳಿ ಸೇತುವೆ ಕಂಬ
ಕಾರವಾರ: ಹಲವು ತಿಂಗಳ ಹಿಂದೆ ಕುಸಿದು ಬಿದ್ದಿದ್ದ, ಸದ್ಯ ತೆರವುಗೊಳ್ಳುತ್ತಿರುವ ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆಯ ಕಂಬವೊಂದು ಬುಡದಲ್ಲಿ ತುಂಡಾಗಿ ವಾಲಿ ನಿಂತಿದೆ.
ಶುಕ್ರವಾರ ನಸುಕಿನ ಜಾವ ಘಟನೆ ನಡೆದಿದ್ದು, ನದಿಯಲ್ಲಿ ವಾಲಿ ನಿಂತ ಸೇತುವೆಯ ಅವಶೇಷ ಜನರಲ್ಲಿ ಆತಂಕ ಸೃಷ್ಟಿಸಿದೆ.
ಸೇತುವೆಯ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ಶೇ.70 ರಷ್ಟು ಮುಗಿದಿದ್ದು, ತೆರವು ಕಾರ್ಯಾಚರಣೆಯ ನಡುವೆಯೇ ಕಂಬದ ಬುಡ ತುಂಡಾಗಿ, ಅದರ ಮೇಲಿದ್ದ ಸುಮಾರು 40 ಮೀಟರ್ ಉದ್ದದ ಸೇತುವೆ ಭಾಗ ನದಿಗೆ ವಾಲಿ ಬಿದ್ದಿದೆ. ಪಕ್ಕದಲ್ಲೇ ಹೊಸ ಸೇತುವೆ ಇದ್ದು, ಅದಕ್ಕೆ ಹಾನಿ ಆಗಿಲ್ಲ.
ತೆರವು ಕಾರ್ಯ ನಡೆಸುವ ಭಾಗವಾಗಿ ಎರಡು ಕಂಬಗಳ ನಡುವಿನ ಸೇತುವೆ ಕೊಂಡಿ ಕಡಿತಗೊಳಿಸಲಾಗಿದೆ. ಅದರ ಭಾರ ತಾಳಲಾರದೆ ಕಂಬ ತುಂಡಾಗಿರಬಹುದು. ಕಾರ್ಯಾಚರಣೆಗಾಗಲಿ, ಹೊಸ ಸೇತುವೆಗೆ ಆಗಲಿ ಯಾವುದೇ ಅಡ್ಡಿ ಇಲ್ಲ ಎಂದು ಕಾರ್ಯಾಚರಣೆ ನಡೆಸುತ್ತಿರುವ ಐ.ಆರ್.ಬಿ ಕಂಪನಿ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ಮುರಿದ ಕಾಳಿ ಸೇತುವೆ ಕಂಬ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.