
ಕಾರವಾರ ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಘಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಘಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು
ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು.
ಗೋವಾದಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ನೌಕಾದಲದ ವಿಶೇಷ ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಬರಮಾಡಿಕೊಂಡರು.
ಬಳಿಕ ಜಲಾಂತರ್ಗಾಮಿ ನೌಕೆಯ ಬಳಿ ತೆರಳಿದ ಅವರು ನೌಕಾದಳದ ಸಿಬ್ಬಂದಿಯತ್ತ ಕೈಬೀಸುತ್ತ ಜಲಮಾಂತರ್ಗಾಮಿ ನೌಕೆಯೊಳಗೆ ತೆರಳಿದರು.
ಸಮುದ್ರದ ಆಳದಲ್ಲಿ ನೌಕೆ ಸಂಚರಿಸುತ್ತಿದ್ದು, ತಾಸಿಗೂ ಹೆಚ್ಚು ಕಾಲ ರಾಷ್ಟ್ರಪತಿ ನೌಕೆಯೊಳಗೆ ಸಂಚರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.