ADVERTISEMENT

‘ಕಥಾಯಾನ’; ಸಾಹಿತ್ಯಿಕ ಕಾರ್ಯಾಗಾರ ಸೆ.7ರಿಂದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 11:28 IST
Last Updated 1 ಆಗಸ್ಟ್ 2019, 11:28 IST
‘ಕಥಾಯಾನ’ದ ಚಿಹ್ನೆ
‘ಕಥಾಯಾನ’ದ ಚಿಹ್ನೆ   

ಕಾರವಾರ:ರಾಜ್ಯಮಟ್ಟದ ಸಾಹಿತ್ಯಿಕ ಕಾರ್ಯಾಗಾರ ‘ಕಥಾಯಾನ’ವನ್ನುಸೆ.7 ಮತ್ತು 8ರಂದುತೀರ್ಥಹಳ್ಳಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತ ಉದಯೋನ್ಮುಖ ಬರಹಗಾರರು, ಆಸಕ್ತರು, ಹೊಸ ಲೇಖಕರು ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದು.

ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತೀಚಿನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು kathayaana@gmail.comಗೆ ಆ.15ರ ಒಳಗಾಗಿ ಕಳುಹಿಸಬೇಕು. ಈಗಾಗಲೇ ಪ್ರಕಟಿತ ಬರಹದ ವೆಬ್ ಲಿಂಕ್‍ ಅನ್ನು ಕೂಡಾ ಮೇಲ್ಮಾಡಬಹುದಾಗಿದೆ.

ಸಮಗ್ರ ಸಾಹಿತ್ಯದ ಮಾಹಿತಿ, ಅಂಕಣ ಬರಹ, ಕಥೆ, ಕಾದಂಬರಿ ರಚನೆಯ ಸ್ಥೂಲ ಚಿತ್ರಣ ಕಟ್ಟಿಕೊಡುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಕನ್ನಡದ ಪ್ರಮುಖ ಅಂಕಣಕಾರರು, ಸಾಹಿತಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ADVERTISEMENT

ಪ್ರತಿಲಿಪಿಯ ಹೊಸ, ಪ್ರತಿಭಾವಂತ ಬರಹಗಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಥಾಯಾನದ ಸಂಚಾಲಕಿ ಪದ್ಮಜಾ ದರಲಗೋಡುಅವರನ್ನು ಮೊಬೈಲ್: 78922 63889, 9480017010 ಸಂಪರ್ಕಿಸಬಹುದು.

ಗರಿಷ್ಠ45 ಜನರಿಗೆ ಅವಕಾಶವಿದೆ. ಭಾಗವಹಿಸುವವರಿಗೆ ವಿವಿಧವ್ಯವಸ್ಥೆಗಳ ಅಂಗವಾಗಿ ಕಾರ್ಯಾಗಾರ ಪ್ರವೇಶ ಶುಲ್ಕ ₹700 ಭರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.