ADVERTISEMENT

ಯಲ್ಲಾಪುರ | ಮೀನುಗಾರಿಕೆ ವೇಳೆ ಇಬ್ಬರು ನೀರುಪಾಲು; ಒಬ್ಬನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:51 IST
Last Updated 12 ಆಗಸ್ಟ್ 2025, 0:51 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಕವಳಗಿ ಹಳ್ಳಕ್ಕೆ ಮೀನುಗಾರಿಕೆಗೆ ತೆರಳಿದ್ದಾಗ ನೀರು ಪಾಲಾಗಿದ್ದ ಮಹಮ್ಮದ್ ರಫೀಕ್‌ (27) ಶವ ಸೋಮವಾರ ಬೇಡ್ತಿ ನದಿಯಲ್ಲಿ ಪತ್ತೆಯಾಗಿದೆ. ನಾಪತ್ತೆ ಆಗಿರುವ ಇವರ ಸಹೋದರ ಮಹಮ್ಮದ್ ಹನೀಫ್‌ (25) ಅವರಿಗಾಗಿ ಶೋಧ ನಡೆದಿದೆ.

ADVERTISEMENT

‘ಭಾನುವಾರ 8 ಮಂದಿ ಕವಲಗಿ ಹಳ್ಳಕ್ಕೆ ಮೀನು ಹಿಡಿಯಲು ಹೋಗಿದ್ದರು. ಹಳ್ಳದಲ್ಲಿ ಏಕಾಏಕಿ ನೀರು ಹೆಚ್ಚಾಗಿ, ಇಬ್ಬರೂ ಮುಳುಗಿದ್ದರು. 6 ಮಂದಿ ಸುರಕ್ಷಿತವಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.