
ಶಿರಸಿ: ಧಾರವಾಡ ಹೈಕೋರ್ಟ್ ಸೂಚನೆಯ ಮೇರೆಗೆ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್‌ನ ಮತ ಎಣಿಕೆಯ ಅರ್ಬನ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನದ ಮತ ಎಣಿಕೆ ಶುಕ್ರವಾರ ನಡೆದಿದ್ದು, ಮೋಹನ ನಾಯಕ ಗೆಲುವು ದಾಖಲಿಸಿದ್ದಾರೆ.
ಈ ಮತಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ಮೋಹನ ನಾಯಕ 120 ಮತಗಳನ್ನು ಪಡೆದು ವಿಜಯಿಯಾದರೆ ಹಾಲಿ ನಿರ್ದೇಶಕ ಮೋಹನದಾಸ ನಾಯಕ 105 ಮತಗಳನ್ನು ಪಡೆದು ಪರಾವಭವಗೊಂಡರು. ಇನ್ನೋರ್ವ ಸ್ಪರ್ಧಿ ವಸಂತ ನಾಯಕ 24 ಮತಗಳನ್ನು ಪಡೆದರೆ ಸರಸ್ವತಿ ಎನ್. ರವಿ 5 ಮತಗಳನ್ನು ಪಡೆದು ಪರಾಭವಗೊಂಡರು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಚುನಾವಣಾ ಅಧಿಕಾರಿಯಾರಿಯಾಗಿ ಕಾರ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.