ADVERTISEMENT

ಮಂಗನ ಖಾಯಿಲೆ: ಶಿರಸಿಯಲ್ಲಿ ಮೊದಲ ಬಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 5:52 IST
Last Updated 3 ಮಾರ್ಚ್ 2024, 5:52 IST
<div class="paragraphs"><p>ಮಂಗನ ಕಾಯಿಲೆ</p></div>

ಮಂಗನ ಕಾಯಿಲೆ

   

ಸಾಂದರ್ಭಿಕ ಚಿತ್ರ

ಶಿರಸಿ: ತಾಲ್ಲೂಕಿನ ಹತ್ತರಗಿ ಸಮೀಪದ ನವಿಲಗಾರದ 68 ವರ್ಷದ ವ್ಯಕ್ತಿ ಕೆ.ಎಫ್.ಡಿ (ಮಂಗನ ಕಾಯಿಲೆ)ಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದೆ ರೋಗ ಬಾಧಿತ ವ್ಯಕ್ತಿ ಶಿರಸಿಯ ಖಾಸಗಿ ಆಸ್ಪತ್ರೆಗೆ ವಾಂತಿ ಹಾಗೂ ಬೇಧಿಯ ನಿಮಿತ್ತ ದಾಖಲಾಗಿದ್ದರು. ನಂತರ ಆಸ್ಪತ್ರೆಯಲ್ಲಿ ಇರುವಂತೆಯೇ ಅವರ ರಕ್ತದ ಒತ್ತಡದಲ್ಲಿ ಏರುಪೇರಾಗಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ರೋಗಿಯು ಕೆ.ಎಫ್.ಡಿ ಯಿಂದ ಬಳಲುತ್ತಿದ್ದದ್ದು ದೃಢವಾಗಿತ್ತು.

ರೋಗಿಗೆ ಡಯಾಲಿಸಿಸ್ ಹಾಗೂ ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಿಸದೆ ರೋಗಿಯು ಮೃತಪಟ್ಟಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.