ADVERTISEMENT

ಉತ್ತರ ಕನ್ನಡ | ಕಾರಿನ ಬಾನೆಟ್‌ಗೆ ನುಗ್ಗಿದ ಕಾಳಿಂಗ ಸರ್ಪ!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 4:52 IST
Last Updated 20 ಡಿಸೆಂಬರ್ 2022, 4:52 IST
ಕಾರಿನ ಬಾನೆಟ್‌ಗೆ ನುಗ್ಗಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರವಾರ ತಾಲ್ಲೂಕಿನ ಕುಚೇಗಾರದಲ್ಲಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು
ಕಾರಿನ ಬಾನೆಟ್‌ಗೆ ನುಗ್ಗಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರವಾರ ತಾಲ್ಲೂಕಿನ ಕುಚೇಗಾರದಲ್ಲಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು   

ಕಾರವಾರ: ಕೈಗಾ ಭಾಗದಿಂದ ಮಲ್ಲಾಪುರದತ್ತ ಭಾನುವಾರ ಬರುತ್ತಿದ್ದ ಕಾರಿನ ಬಾನೆಟ್‌ಗೆ ಅಚಾನಕ್ ಆಗಿ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಜೈಸಿಂಗ್ ಎಂಬುವವರು ಮಧ್ಯಾಹ್ನ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಆಗ ಕುಚೇಗಾರ್ ಹತ್ತಿರ ಕಾಳಿಂಗ ಸರ್ಪವು ಅವರ ಬಾನೆಟ್‌ನೊಳಗೆ ನುಗ್ಗಿತ್ತು. ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ಸದಾನಂದ ಗುನಗಿ ಮತ್ತು ಬಿಲಾಲ್ ಶೇಖ್ ಮುನ್ನೆಚ್ಚರಿಕೆ ವಹಿಸಿ ಹಾವಿಗೆ ಏನೂ ತೊಂದರೆಯಾಗದಂತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಜತ್ ಗೋವೇಕರ್, ಪರಶುರಾಮ್, ಮಧುಕುಮಾರ್, ನಾಗರಾಜ್, ರಾಜೇಶ್, ರಾಘವೇಂದ್ರ, ಸಂದೀಪ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.