ADVERTISEMENT

ಕುಮಟಾ | ಬೆಂಕಿ ಅವಘಡ: ₹ 7.70 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:23 IST
Last Updated 13 ಫೆಬ್ರುವರಿ 2026, 7:23 IST
ಕುಮಟಾ ಪಟ್ಟಣ ಸಮೀಪದ ವನ್ನಳ್ಳಿ ಹನೀಫಾ ಲಂಗಾಡೋ ಎನ್ನುವವರ ಮನೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿ ಉರಿಯಿತು
ಕುಮಟಾ ಪಟ್ಟಣ ಸಮೀಪದ ವನ್ನಳ್ಳಿ ಹನೀಫಾ ಲಂಗಾಡೋ ಎನ್ನುವವರ ಮನೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿ ಉರಿಯಿತು   

ಕುಮಟಾ: ಪಟ್ಟಣ ಸಮೀಪದ ವನ್ನಳ್ಳಿ ಹನೀಫಾ ಲಂಗಾಡೋ ಎನ್ನುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ ಉಂಟಾಗಿ ₹ 7 ಲಕ್ಷ ಹಾನಿ ಸಂಭವಿಸಿದೆ ಎಂದು ತಹಶೀಲ್ದಾರ್ ಕೃಷ್ಣ ಕಾಮಕರ್ ತಿಳಿಸಿದ್ದಾರೆ.

ಮನೆಯಲ್ಲಿದ್ದ ₹ 3.45 ಲಕ್ಷ ಮೌಲ್ಯದ ಮೂರು ಮೀನುಗಾರಿಕಾ ದೋಣಿ, ವಾಷಿಂಗ್ ಮಷಿನ್, ಸೋಲಾರ್ ಪ್ಯಾನಲ್ ಬೆಂಕಿಗಾಹುತಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ಗೋಕರ್ಣದ ಬೇಲೆಹಿತ್ತಲ ಈಶ್ವರ ಅಂಬಿಗ ಎನ್ನುವವರ ಮೀನುಗಾರಿಕಾ ಬಲೆಗಳು ಬೆಂಕಿಗಾಹುತಿಯಾಗಿ ಸುಮಾರು ₹ 70 ಸಾವಿರ ಹಾನಿ ಸಂಭವಿಸಿದೆ. ಮಣಕಿ ಗ್ರಾಮದ ಮೂರೂರು ರಸ್ತೆಯ ಗುಡ್ಡದಲ್ಲಿ ನೈಸರ್ಗಿಕವಾಗಿ ಬೆಳೆದ ಸುಮಾರು 30 ಎಕರೆ ಒಣ ಹುಲ್ಲು (ಕರಡ) ಬೇಣಕ್ಕೆ ಬೆಂಕಿ ತಗಲಿ ಹಾನಿಯಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.