ADVERTISEMENT

ಕುವೈತ್‌ನಲ್ಲಿ ಉದ್ಯೋಗ ಕೊಡಿಸುವ ಆಮಿಷ: ₹55 ಲಕ್ಷ ಮೋಸ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:36 IST
Last Updated 26 ಆಗಸ್ಟ್ 2025, 2:36 IST
   

ಹೊನ್ನಾವರ: ಕುವೈತ್ ದೇಶದ ರಕ್ಷಣಾ ಮಂತ್ರಾಲಯದಲ್ಲಿ ಉದ್ಯೋಗ ದೊರಕಿಸಿಕೊಡುವ ಆಮಿಷವೊಡ್ಡಿ 33 ಜನರಿಂದ ಒಟ್ಟೂ ₹55 ಲಕ್ಷ ಪಡೆದು ಉದ್ಯೋಗ ಕೊಡಿಸದೆ ಮೋಸ ಮಾಡಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ಹೆರಂಗಡಿಯ ಜಾಫರ್ ಸಾದಿಕ್ ಹುಸೇನ್ ಮುಕ್ತೇಸರ್, ಹೊನ್ನಾವರದ ನೌಶಾದ್ ಖ್ವಾಜಾ ದಾವೂದ್ ಹಾಗೂ ಹೈದ್ರಾಬಾದ್‌ನ ಸುಜಾತಾ ಜುಮ್ಮಿ ಕುಂಟಾ ಆರೋಪಿಗಳು.

ಘಟನೆಯ ಕುರಿತಂತೆ ಕೇರಳ ರಾಜ್ಯದ ಬಿಜ್ಜು ದಾಮೋದರನ್ ಉದಯಂತಿಲ್ ಇಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.
'ಬಿಜ್ಜು ಹಾಗೂ ಆತನ ಸ್ನೇಹಿತ ನೌಶಾದ್ ಅಂಗೀಲತ್ ಅಸ್ಸಿನಾರ್ ಕೆ.ಪಿ ಅವರಿಗೆ ಕುವೈತ್‌ನಲ್ಲಿ ಪರಿಚಯವಾಗಿದ್ದ ಜಾಫರ್, ಕುವೈತ್ ರಕ್ಷಣಾ ಮಂತ್ರಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ. ಜಾಫರ್ ಮಾತನ್ನು ನಂಬಿದ ಬಿಜ್ಜು ಹಾಗೂ ನೌಶಾದ್ 33 ಉದ್ಯೋಗಾಕಾಂಕ್ಷಿಗಳಿಂದ ಹಣ ಸಂಗ್ರಹಿಸಿ ಮೂವರು ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟೂ ₹55 ಲಕ್ಷ ಹಣ ಜಮೆ ಮಾಡಿದ್ದರು. ಉದ್ಯೋಗ ಕೊಡಿಸಿಲ್ಲ ಹಾಗೂ ಹಣವನ್ನೂ ವಾಪಸ್ ನೀಡಿಲ್’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.