ADVERTISEMENT

ಯಲ್ಲಾಪುರ: ಮರಹಳ್ಳಿ ರಸ್ತೆಯಲ್ಲಿ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 12:58 IST
Last Updated 17 ಜುಲೈ 2024, 12:58 IST
<div class="paragraphs"><p>ಭೂಕುಸಿತ (ಪ್ರಾತಿನಿಧಿಕ ಚಿತ್ರ)</p></div>

ಭೂಕುಸಿತ (ಪ್ರಾತಿನಿಧಿಕ ಚಿತ್ರ)

   

ಯಲ್ಲಾಪುರ: ತಾಲ್ಲೂಕಿನ ಮಲವಳ್ಳಿಯಿಂದ ಮರಹಳ್ಳಿಗೆ ಸಾಗುವ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಮಲವಳ್ಳಿಯ ಜೋಗಾಳಕೇರಿ ಅಸ್ಲೆಕೊಪ್ಪದಲ್ಲಿ ಮನೆ ಪಕ್ಕದ ಗುಡ್ಡ ಕುಸಿಯುವ ಅಪಾಯ ಇರುವ ಹಿನ್ನೆಲೆಯಲ್ಲಿ ನಾಲ್ಕು ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಈ ನಾಲ್ಕು ಕುಟುಂದವರಿಗೆ ಮಲವಳ್ಳಿಯ ಪ್ರಾಥಮಿಕ ಕೇಂದ್ರದ ಪಕ್ಕದಲ್ಲಿರುವ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು ರಾತ್ರಿಯ ಮೇಳೆ ಮನೆಯಲ್ಲಿ ವಸತಿ ಮಾಡದಂತೆ ಸೂಚಿಸಲಾಗಿದೆ ಎಂದು ಮಾವಿನಮನೆ ಗ್ರಾಮ ಪಂಚಾಯ್ತಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.