ADVERTISEMENT

ಅನಮೋಡದಲ್ಲಿ ಹೆದ್ದಾರಿಗೆ ಕುಸಿದ ಗುಡ್ಡ: ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 9:50 IST
Last Updated 4 ಜುಲೈ 2022, 9:50 IST
   

ಜೊಯಿಡಾ/ ಕಾರವಾರ: ಭಾರಿ ಮಳೆಗೆ ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿ 4ಎ ಮೇಲೆ, ಅನಮೋಡ ಘಟ್ಟದಲ್ಲಿ ದುದಸಾಗರ ದೇವಸ್ಥಾನ ಬಳಿ ಗುಡ್ಡ ಕುಸಿದಿದೆ. ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಅನಮೋಡ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾನುವಾರ ರಾತ್ರಿ ಸುಮಾರು 11.30 ರ ವೇಳೆಯಲ್ಲಿ ಮಣ್ಣು ಕುಸಿಯಲು ಆರಂಭಿಸಿತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಸ್ಥಳಕ್ಕೆ ಗೋವಾದ ಅಗ್ನಿಶಾಮಕ ದಳದವರು, ಪೊಲೀಸರು ಭೇಟಿ ನೀಡಿದ್ದಾರೆ. ಜೆ.ಸಿ.ಬಿ ಮೂಲಕ ಮಣ್ಣನ್ನು ತೆರೆವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಜೊಯಿಡಾ ತಾಲ್ಲೂಕಿನ ರಾಮನಗರ ಮೂಲಕ ಗೋವಾ ರಾಜ್ಯಕ್ಕೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ- ಧಾರವಾಡ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ.

ADVERTISEMENT


ಹೊನ್ನಾವರದ ಹಳದಿಪುರ ಬಗಾಣಿ ಕ್ರಾಸ್‌ನಲ್ಲಿ ಮನೆಯೊಂದರ ಮೇಲೆ ದೊಡ್ಡ ಆಲದ ಮರ ಬಿದ್ದಿದೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವಿದ್ಯುತ್ ಕಂಬಗಳೂ ಮುರಿದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.