ADVERTISEMENT

ದಾಂಡೇಲಿ: ಕಲಿಕಾ ಹಬ್ಬ’ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:27 IST
Last Updated 29 ಜನವರಿ 2026, 7:27 IST
ದಾಂಡೇಲಿ ಗೌಳಿವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು.
ದಾಂಡೇಲಿ ಗೌಳಿವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು.   

ದಾಂಡೇಲಿ: ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಗೌಳಿವಾಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಾಂಡೇಲಿ ತಾಲ್ಲೂಕಿನ ಕೋಗಿಲಬನ ಕ್ಲಸ್ಟರ್ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು.

 ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ಸಿ.ಹಾದಿಮನಿ ಮಾತನಾಡಿ, ‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸೂಕ್ತ ವೇದಿಕೆ  ಕಲ್ಪಿಸಿ ಕೊಡುವ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಲಿಕಾ ಬೌದ್ಧಿಕ ಮಟ್ಟ ಹೆಚ್ಚಳವಾಗುತ್ತದೆ ಜೊತೆಗೆ ಓದಿನ ಬಗ್ಗೆ ಆಸಕ್ತಿಯೂ ಮೂಡಿಸುತ್ತದೆ ಎಂದರು. 

ಸಿಆರ್‌ಪಿಗಳಾದ ಲಲಿತಾ ಪುಟ್ಟು ಗೌಡ, ಶ್ರೀದೇವಿ ಪುಲಿ, ಮುಖ್ಯಶಿಕ್ಷಕಿ ರತ್ನಾ ಬೋಡಕರ, ಶಿಕ್ಷಕಿಯರಾದ ಉಜ್ವಲ ಸದಗಲಿ, ಚಂದ್ರಕಲಾ ಬಾಂದೇಕರ, ವಿದ್ಯಾವತಿ ಸೋಮಶೆಟ್ಟಿ, ರೇಖಾ ನಾಯ್ಕ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.