ADVERTISEMENT

ಸುಗಮ ಚುನಾವಣೆಗೆ ಸಿದ್ಧತೆ ಆರಂಭ: ಎಸಿ ಅಪರ್ಣ ರಮೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 13:26 IST
Last Updated 18 ಮಾರ್ಚ್ 2024, 13:26 IST
<div class="paragraphs"><p>ಅಪರ್ಣ ರಮೇಶ</p></div>

ಅಪರ್ಣ ರಮೇಶ

   

ಶಿರಸಿ: ಚುನಾವಣೆಯು ಪಾರದರ್ಶಕ ಮತ್ತು ಉತ್ತಮ ರೀತಿಯಲ್ಲಿ ನಡೆಯುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಅಪರ್ಣ ರಮೇಶ ತಿಳಿಸಿದರು.

ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಸಿ ತಾಲ್ಲೂಕಿನಲ್ಲಿ 148 ಹಾಗೂ ಸಿದ್ದಾಪುರ ತಾಲ್ಲೂಕಿನಲ್ಲಿ 118 ಮತಗಟ್ಟೆಗಳು ಸೇರಿದಂತೆ ಒಟ್ಟು 266 ಮತಗಟ್ಟೆಗಳಿವೆ. 1,01,484 ಪುರುಷ, 1,01,163 ಮಹಿಳಾ, 1 ಇತರೆ, 139 ಸೇವಾ ಮತದಾರರು ಸೇರಿದಂತೆ ಒಟ್ಟು 2,02,648 ಮತದಾರರಿದ್ದಾರೆ ಎಂದರು.

ADVERTISEMENT

ಚುನಾವಣಾ ಕಾರ್ಯ ಸುಗಮವಾಗಿ ನಿರ್ವಹಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಶಿರಸಿಯಲ್ಲಿ 14, ಸಿದ್ದಾಪುರದಲ್ಲಿ 12 ಸೇರಿದಂತೆ ಒಟ್ಟು 26 ಸೆಕ್ಟರ್ ಆಫೀಸರ್, ಅಕೌಂಟಿಂಗ್ ಟೀಮ್ 1, ವಿವಿಟಿ 1, ಶಿರಸಿ 6, ಸಿದ್ದಾಪುರ 3 ಒಟ್ಟು 9 ವಿಎಸ್.ಟಿ, ಶಿರಸಿಯಲ್ಲಿ 1 ಮತ್ತು ಸಿದ್ದಾಪುರದಲ್ಲಿ 2 ತನಿಖಾ ಠಾಣೆ ತೆರೆಯಲಾಗಿದೆ ಎಂದು ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ ಹಾಗೂ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಿರಳಗಿ, ಚೂರಿಕಟ್ಟೆ, ಚಿಪಗಿಯಲ್ಲಿ ತನಿಖಾ ಠಾಣೆ ಬಿಗಿಗೊಳಿಸಲಾಗಿದೆ. ಚುನಾವಣೆಗೆ ಸಂಬಂಧಿ ದೂರುಗಳಿದ್ದರೆ 08384-226382 ಸಂಪರ್ಕಿಸಬಹುದು. ಮತದಾರರ ಮಾಹಿತಿ, ಅಭ್ಯರ್ಥಿಗಳ ಮಾಹಿತಿ, ಮತಗಟ್ಟೆಗಳ ಮಾಹಿತಿ, ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ ಎಂದರು.

ಮಾರಿಕಾಂಬಾ ಜಾತ್ರೆಗೆ ವೈಯಕ್ತಿಕವಾಗಿ ಶುಭ ಕೋರುವ ಜಾಹೀರಾತು, ಬ್ಯಾನರ್ ಮಾತ್ರ ಬಳಸಬೇಕು. ಪಕ್ಷದ ಚಿಹ್ನೆ, ಹೆಸರು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ತಹಶೀಲ್ದಾರ್‌ ಕಚೇರಿ ಅಥವಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪರವಾನಗಿ ಪಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್‌ ಶ್ರೀಕೃಷ್ಣ ಕಾಮಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.