ADVERTISEMENT

ಆಂತರಿಕ ತಿಕ್ಕಾಟದಿಂದ ಕಡಿಮೆ ಮತ: ಜೆಡಿಎಸ್‌ ಪರಾಜಿತ ಅಭ್ಯರ್ಥಿ ಡಾ ನಾಗೇಶ ನಾಯ್ಕ

​ಪ್ರಜಾವಾಣಿ ವಾರ್ತೆ
Published 16 ಮೇ 2023, 12:48 IST
Last Updated 16 ಮೇ 2023, 12:48 IST
ನಾಗೇಶ ನಾಯ್ಕ
ನಾಗೇಶ ನಾಯ್ಕ   

ಯಲ್ಲಾಪುರ: ‘ಪಕ್ಷದಲ್ಲಿನ ಆಂತರಿಕ ತಿಕ್ಕಾಟದಿಂದಾಗಿ ತಮಗೆ ನಿರೀಕ್ಷಿತ ಮತ ದೊರೆಯಲಿಲ್ಲ’ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪರಾಜಿತ ಅಭ್ಯರ್ಥಿ ಡಾ ನಾಗೇಶ ನಾಯ್ಕ ಕಾಗಾಲ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಆ ಮತಗಳನ್ನು ಸೆಳೆಯಲು ನಮಗೆ ಸಾಧ್ಯವಾಗಲಿಲ್ಲ. ಆಡಳಿತ ವಿರೋಧಿ ಅಲೆಯ ಮತಗಳು ಕಾಂಗ್ರೆಸ್‌ಗೆ ಹೋದವು. ಬಿ ಪಾರಂ ದೊರೆಯಲು ತಡವಾದ ಕಾರಣ ಪ್ರಚಾರಕ್ಕೆ ಸಮಯದ ಕೊರತೆಯೂ ಉಂಟಾಯಿತು. ಕೊನೆಯ ಕ್ಷಣದಲ್ಲಿ ಕೆಲವರು ಪಕ್ಷ ತೊರೆದು ಮತದಾರರಿಗೆ ಗೊಂದಲ ಉಂಟುಮಾಡಿದರಲ್ಲದೇ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಿದರು. ಇವೆಲ್ಲವೂ ಪಕ್ಷದ ಹಿನ್ನಡೆಗೆ ಕಾರಣವಾಯಿತು' ಎಂದರು.

‘ಸೋಲಿನಿಂದ ಹತಾಶನಾಗಿಲ್ಲ. ಕಾರ್ಯಕರ್ತರು ಹತಾಶರಾಗುವ ಅಗತ್ಯವಿಲ್ಲ. ಜನತೆಯ ಮನಸ್ಸು ನಮ್ಮ ವಿರುದ್ಧ ಇಲ್ಲ. ಸಂಘಟನೆ, ಹೋರಾಟ ಮುಂದುವರಿಸಲಾಗುವುದು. ಅಭಿವೃದ್ಧಿ ಕೆಲಸಕ್ಕೆ ಸದಾ ಬೆಂಬಲ ನೀಡಲಾಗುವುದು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಮುಂತಾದವುಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗುವುದು' ಎಂದರು.

ADVERTISEMENT

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬೆನಿತ್ ಸಿದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.