ADVERTISEMENT

ಚಂದ್ರಗ್ರಹಣ: ಮಹಾಬಲೇಶ್ವರನ ಸ್ಪರ್ಶ ದರ್ಶನ ಪೂಜೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 15:17 IST
Last Updated 27 ಅಕ್ಟೋಬರ್ 2023, 15:17 IST
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.  
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.     

ಗೋಕರ್ಣ: ಶನಿವಾರ ಮಧ್ಯರಾತ್ರಿ ನಡೆಯುವ ಚಂದ್ರಗ್ರಹಣದ ಅವಧಿಯಲ್ಲಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ಆತ್ಮಲಿಂಗದ ದರ್ಶನಕ್ಕೆ ಅವಕಾಶ ಲಭ್ಯವಿದ್ದು, ಭಕ್ತರು ಮಹಾಬಲೇಶ್ವರನ ಸ್ಪರ್ಶ ದರ್ಶನ ಪಡೆಯಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶನಿವಾರ ರಾತ್ರಿ 1 ಗಂಟೆಯಿಂದ ಚಂದ್ರಗ್ರಹಣ ಮುಗಿಯುವ ರಾತ್ರಿ 2.30ರ ವರೆಗೆ ದೇವಸ್ಥಾನ ತೆಗೆದಿರಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಆದರೆ ಶನಿವಾರ ಸಂಜೆ 4 ರಿಂದ 5.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಶವಿರಲಿದ್ದು, 5.30 ರ ನಂತರ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಅದೇ ದಿನ ರಾತ್ರಿ ಭಕ್ತರಿಗೆ ಅಮೃತಾನ್ನ ಪ್ರಸಾದ ಭೋಜನ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT