ADVERTISEMENT

ಪೌರ ಕಾರ್ಮಿಕರ ಉಪಾಹಾರ ಸ್ಥಗಿತ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 13:47 IST
Last Updated 3 ಏಪ್ರಿಲ್ 2025, 13:47 IST

ದಾಂಡೇಲಿ:  ‘ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಬೆಳಿಗ್ಗೆ ನೀಡಬೇಕಾಗಿದ್ದ ಉಪಾಹಾರವನ್ನು ದಾಂಡೇಲಿ ಹಾಗೂ ಶಿರಸಿ ನಗರ ಸಭೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಸರ್ಕಾರದ ಆದೇಶ ಉಲ್ಲಂಘನೆ, ತಕ್ಷಣ ಸರಿ ಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ’ ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಸ್ಯಾಮ್‌ಸನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಗರಸಭೆಗಳಲ್ಲಿ ದುಡಿಯುವ ಗುತ್ತಿಗೆ, ಹೊರಗುತ್ತಿಗೆ, ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು ಹಾಗೂ ಇನ್ನಿತರ ಕಾರ್ಮಿಕರಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಕಾರ್ಮಿಕರಿಗೆ ಕಾಲಕಾಲಕ್ಕೆ ನೀಡಬೇಕಾದ ಹಲವು ಸವಲತ್ತುಗಳನ್ನು ನೀಡಲು ಸ್ಪಷ್ಟ ಆದೇಶ ಮತ್ತು ನಿರ್ದೇಶನ ಇದ್ದರೂ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ, ಬೆಳಗಿನ ಉಪಾಹಾರ, ಆರೋಗ್ಯ ತಪಾಸಣೆ,  ಕಾಯಂ ಕಾರ್ಮಿಕರಿಗೆ ಸಂಕಷ್ಟ ಭತ್ಯೆ, ಸುರಕ್ಷಿತ ಪರಿಕರ ನೀಡದೇ ಸ್ಥಳೀಯ ಅಧಿಕಾರಿಗಳು ಸರ್ಕಾರದ ಆದೇಶ ಮತ್ತು ನಿರ್ದೇಶನವನ್ನುಉಲ್ಲಂಘಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಳೆಗಾಲ ಹತ್ತಿರವಾಗುತ್ತಿದ್ದು ಆರೋಗ್ಯ ಪರಿಕರಗಳನ್ನು, ಗಂಬೂಟ್, ನೀಡಲು ಖರೀದಿ ಪ್ರಕ್ರಿಯೆ ಮುಂತಾದ ಸೌಲಭ್ಯಗಳನ್ನು ಈಗಲೇ ಆರಂಭಿಸಬೇಕು’
ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT