ADVERTISEMENT

ಮಾಧವಿಗೆ ದಿನಕರ ದೇಸಾಯಿ ಕಾವ್ಯ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:24 IST
Last Updated 13 ಆಗಸ್ಟ್ 2020, 16:24 IST
ಮಾಧವಿ ಭಂಡಾರಿ
ಮಾಧವಿ ಭಂಡಾರಿ   

ಅಂಕೋಲಾ: ಇಲ್ಲಿನ ದಿನಕರ ದೇಸಾಯಿ ಪ್ರತಿಷ್ಠಾನವು ಡಾ.ದಿನಕರ ದೇಸಾಯಿ ಹೆಸರಿನಲ್ಲಿ ನೀಡುವ ರಾಜ್ಯ ಮಟ್ಟದ ಕಾವ್ಯ ಪುರಸ್ಕಾರವು ಕವಯತ್ರಿ ಮಾಧವಿ ಭಂಡಾರಿ ಕೆರೆಕೋಣ ಅವರ ‘ಮೌನಗರ್ಭದ ಒಡಲು‘ ಕವನ ಸಂಕಲನಕ್ಕೆ ದೊರೆತಿದೆ.

ಪುರಸ್ಕಾರವು ₹ 10ಸಾವಿರ ನಗದು ಹಾಗೂ ಪ್ರಶಸ್ತಿಪತ್ರವನ್ನೊಳಗೊಂಡಿದೆ. ಕೋವಿಡ್ 19 ಇರುವ ಕಾರಣಕ್ಕೆ ದಿನಕರ ದೇಸಾಯಿ ಅವರ ಹುಟ್ಟಿದ ದಿನ ಸೆ.10ರಂದು ಪ್ರತಿಷ್ಠಾನದ ಕೆಲವು ಪ್ರತಿನಿಧಿಗಳು, ಮಾಧವಿ ಅವರ ಮನೆಗೆ ಹೋಗಿ ಪುರಸ್ಕಾರ ನೀಡಲಿದ್ದಾರೆ.

ದಿನಕರ ದೇಸಾಯಿ ಹೆಸರಿನಲ್ಲಿ ನೀಡುತ್ತಿರುವ 22ನೇ ಕಾವ್ಯ ಪುರಸ್ಕಾರ ಇದಾಗಿದೆ. ಈ ವರ್ಷ 2018 ಮತ್ತು 2019ನೇ ಸಾಲಿನ ಕವನ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಸಾಹಿತಿಗಳಾದ ಜಯಂತ ಕಾಯ್ಕಿಣಿ, ಆರ್.ಎಸ್. ನಾಯಕ, ಭಾಗೀರಥಿ ಹೆಗಡೆ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಈ ಕೃತಿಯನ್ನು ಆಯ್ಕೆ ಮಾಡಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.