ADVERTISEMENT

ಮಲೆನಾಡು ಸೊಸೈಟಿ | ₹ 47 ಲಕ್ಷ ಲಾಭ: ಎಂ.ಆರ್‌.ಹೆಗಡೆ ಕುಂಬ್ರಿಗುಡ್ಡೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:36 IST
Last Updated 9 ಸೆಪ್ಟೆಂಬರ್ 2025, 2:36 IST
ಎಂ ಆರ್‌ ಹೆಗಡೆ
ಎಂ ಆರ್‌ ಹೆಗಡೆ   

ಯಲ್ಲಾಪುರ: ʻಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ ₹47 ಲಕ್ಷ   ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 12 ರಷ್ಟು ಡಿವಿಡೆಂಡ್‌ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆʼ ಎಂದು ಸಂಘದ ಅಧ್ಯಕ್ಷ ಎಂ.ಆರ್‌.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.

ಪಟ್ಟಣದ ಅಡಿಕೆ ಭವನದಲ್ಲಿ  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘ ಈಗಾಗಲೇ ಯಶಸ್ವಿ 26 ವರ್ಷಗಳನ್ನು ಪೂರೈಸಿದೆ. ಸದಸ್ಯರ, ಗ್ರಾಹಕರ ಸಹಕಾರದಿಂದ ಪ್ರತಿ ವರ್ಷವೂ ಉತ್ತಮ ಪ್ರಗತಿ ಸಾಧಿಸುತ್ತಿದೆ. ಯಾವುದೇ ಬ್ಯಾಂಕಿನಿಂದ ಸಾಲ ಪಡೆಯದೇ ತನ್ನ ಸ್ವಂತ ಬಂಡವಾಳದಿಂದಲೇ ವ್ಯವಹಾರ ನಡೆಸುತ್ತಿದೆ. ತಾಲ್ಲೂಕಿನ ರೈತರ ಜೊತೆ ಅಂಕೋಲಾ, ಮುಂಡಗೋಡ, ಜೊಯಿಡಾ ಭಾಗದ ರೈತರು ಇಲ್ಲಿ ಕೃಷಿ ಯಂತ್ರೋಪಕರಣ ಖರೀದಿಸುತ್ತಿದ್ದಾರೆ. ಸೆ.12 ರಂದು ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದ್ದು ತಾಲ್ಲೂಕಿನ 12 ಯುವ ಕೃಷಿಕರನ್ನು ಗೌರವಿಸಲಾಗುವುದುʼ ಎಂದರು.

ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೇಪಾಲ, ಆಡಳಿತ ಮಂಡಳಿ ಸದಸ್ಯರಾದ ಜಿ.ಆರ್‌.ಹೆಗಡೆ ಬೆದೆಹಕ್ಲು, ರವೀಂದ್ರ ಗೌಡರ್‌ ಕುಂದರಗಿ, ರಾಘವೇಂದ್ರ ಭಟ್ಟ ಕೋಣೆಮನೆ, ದತ್ತಾತ್ರಯ ಬೋಳಗುಡ್ಡೆ, ಎಂ.ಪಿ.ಹೆಗಡೆ ಚವತ್ತಿ, ವಾಸು ಲಿಂಗಪ್ಪ ಭೋವಿ ತುಡುಗುಣಿ, ಮಧುಕೇಶವ ಭಟ್ಟ ಕರಡಿಗೆಮನೆ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.