ADVERTISEMENT

‘ಔಷಧ ಸಸ್ಯಲೋಕ‌’ ನಿರ್ಮಾಣಕ್ಕೆ ಚಾಲನೆ

ಸರಳವಾಗಿ ರಾಮಕೃಷ್ಣ ಹೆಗಡೆ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 12:39 IST
Last Updated 29 ಆಗಸ್ಟ್ 2019, 12:39 IST
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸಿದ್ದಾಪುರದ ಧನ್ವಂತರಿ ಆಯುರ್ವೇದ ಕಾಲೇಜಿನಲ್ಲಿ ಗುರುವಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಮೀರಾ ಸಾಬ್ ರಕ್ತ ಚಂದನದ ಗಿಡ ನೆಟ್ಟರು
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸಿದ್ದಾಪುರದ ಧನ್ವಂತರಿ ಆಯುರ್ವೇದ ಕಾಲೇಜಿನಲ್ಲಿ ಗುರುವಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಮೀರಾ ಸಾಬ್ ರಕ್ತ ಚಂದನದ ಗಿಡ ನೆಟ್ಟರು   

ಸಿದ್ದಾಪುರ: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮ ದಿನಾಚರಣೆಯನ್ನು ಪಟ್ಟಣದ ಧನ್ವಂತರಿ ಆಯುರ್ವೇದ ಕಾಲೇಜಿನ ಆವರಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ‘ಔಷಧ ಸಸ್ಯಲೋಕ’ ಉದ್ಯಾನ ನಿರ್ಮಾಣಕ್ಕೆಚಾಲನೆ ನೀಡಲಾಯಿತು.

ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ‘ರಾಮಕೃಷ್ಣ ಹೆಗಡೆ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಉತ್ಸವದ ಮಾದರಿಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಪ್ರವಾಹದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಹೆಗಡೆ ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಇದು ರಾಮಕೃಷ್ಣ ಹೆಗಡೆ ಅವರು ಹುಟ್ಟಿದ ಊರು. ಆದ್ದರಿಂದ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಜವಾಬ್ದಾರಿ ನಮಗಿದೆ’ ಎಂದರು.

‘ಲೋಕ’ ಎಂಬ ಶಬ್ದ ರಾಮಕೃಷ್ಣ ಹೆಗಡೆ ಅವರಿಗೆ ಪ್ರಿಯವಾದುದು. ಆದ್ದರಿಂದ ಈ ಔಷಧ ಉದ್ಯಾನಕ್ಕೆ ‘ಔಷಧ ಸಸ್ಯಲೋಕ’ ಎಂದು ಹೆಸರಿಡಲಾಗಿದೆ. ಸುಮಾರುಒಂದುಸಾವಿರ ಔಷಧ ಗಿಡಗಳನ್ನು ಇಲ್ಲಿ ಬೆಳೆಸುವ ಉದ್ದೇಶ ನಮ್ಮದಾಗಿದೆ. ಅಳಿವಿನ ಅಂಚಿನಲ್ಲಿರುವ ಔಷಧ ಸಸ್ಯಗಳ ಸಂರಕ್ಷಣೆಯ ತಾಣ ಇದಾಗಬೇಕು ಎಂಬುದು ನಮ್ಮ ಆಸೆ’ ಎಂದು ಯೋಜನೆಯನ್ನು ವಿವರಿಸಿದರು.

ADVERTISEMENT

ಹಿರಿಯ ಸಾಮಾಜಿಕ ಕಾರ್ಯಕರ್ತ ಮೀರಾ ಸಾಬ್, ರಕ್ತ ಚಂದನದ ಗಿಡವನ್ನು ನೆಡುವ ಮೂಲಕಯೋಜನೆಯನ್ನು ಉದ್ಘಾಟಿಸಿದರು. ಡಾ.ಮಧುಕೇಶ್ವರ ಹೆಗಡೆ ರಕ್ತ ಚಂದನದ ಬಗ್ಗೆ ವಿವರಣೆ ನೀಡಿದರು. ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ವಿನಾಯಕ ರಾವ್ ಹೆಗಡೆ, ಗೌರವ ಕಾರ್ಯದರ್ಶಿ ಕೆ.ಐ.ಹೆಗಡೆ ತಾರಗೋಡು, ಧನ್ವಂತರಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಶಿಕ್ಷಣ ಪ್ರಸಾರಕ ಸಮಿತಿ ಪರವಾಗಿ ಮೀರಾ ಸಾಬ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದಡಾ.ರೂಪಾ ಭಟ್ಟ ಸ್ವಾಗತಿಸಿದರು. ಡಾ.ಸ್ನೇಹಾಲಿ ವಂದಿಸಿದರು. ಡಾ.ಶ್ರೀಕಾಂತ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.