ADVERTISEMENT

ಭಟ್ಕಳ: ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:55 IST
Last Updated 6 ಜೂನ್ 2025, 13:55 IST
ಭಟ್ಕಳ ಸಚಿವರ ಕಚೇರಿಯಲಿ ಸಚಿವ ಮಂಕಾಳ ವೈದ್ಯ ಜನರ ಸಮಸ್ಯೆ ಆಲಿಸಿದರು.
ಭಟ್ಕಳ ಸಚಿವರ ಕಚೇರಿಯಲಿ ಸಚಿವ ಮಂಕಾಳ ವೈದ್ಯ ಜನರ ಸಮಸ್ಯೆ ಆಲಿಸಿದರು.   

ಭಟ್ಕಳ: ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ಎಸ್‌. ವೈದ್ಯ ಅವರು ಶುಕ್ರವಾರ ಪಟ್ಟಣದ ತಮ್ಮಕ ಚೇರಿಯಲ್ಲಿ ಜನಸ್ಪಂದನಾ ಸಭೆ ನಡಸಿ ಜನರ ಅಹವಾಲು ಸ್ವೀಕರಿಸಿದರು.

ರಸ್ತೆ ನಿರ್ಮಾಣ, ಮನೆ ರಿಪೇರಿ, ಶಾಲೆಗಳಿಗೆ ಶಿಕ್ಷಕರ ಕೊರತೆ ಸೇರಿದಂತೆ ಸಾರ್ವಜನಿಕರಿಂದ ಬಂದ ಮನವಿಗೆ ಸ್ಪಂದಿಸಿದ ಸಚಿವರು ಆದ್ಯತೆಯ ಮೇರೆಗೆ ಮಾಡಿಕೊಡುವ ಭರವಸೆ ನೀಡಿದರು.

ಮಕ್ಕಳ ಶಿಕ್ಷಣ, ಮನೆ ರಿಪೇರಿ ಹಾಗೂ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಬಂದಂತಹ ಅರ್ಜಿದಾರರಿಗೆ ವೈಯಕ್ತಿಕಗಾಗಿ ಧನಸಹಾಯ ನೀಡಿದ ಸಚಿವರು ಸರ್ಕಾರದಿಂದಲೂ ನೆರವು ನೀಡುವ ಭರವಸೆ ನೀಡಿದರು.

ADVERTISEMENT

ಮಗಳು ಬೀನಾ ವೈದ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.