ADVERTISEMENT

ಜೊಯಿಡಾ | ‘ಜಲಜೀವನ’ ಕಾಮಗಾರಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 13:40 IST
Last Updated 27 ನವೆಂಬರ್ 2023, 13:40 IST
ಜೊಯಿಡಾ ತಾಲ್ಲೂಕಿನ ವೈಜಗಾವದಲ್ಲಿ ಶಾಸಕ ಆರ್.ವಿ ದೇಶಪಾಂಡೆಯವರು ಸೋಮವಾರ ಜಲಜೀವನ ಮಿಷನ್ ಯೋಜನೆಯಡಿ ನಡೆಯುವ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದರು
ಜೊಯಿಡಾ ತಾಲ್ಲೂಕಿನ ವೈಜಗಾವದಲ್ಲಿ ಶಾಸಕ ಆರ್.ವಿ ದೇಶಪಾಂಡೆಯವರು ಸೋಮವಾರ ಜಲಜೀವನ ಮಿಷನ್ ಯೋಜನೆಯಡಿ ನಡೆಯುವ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದರು   

ಜೊಯಿಡಾ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಇಲಾಖೆಯ ಜಲಜೀವನ ಮಿಷನ್ ಯೋಜನೆಯಡಿ ತಾಲ್ಲೂಕಿನ ವೈಜಗಾವ ಗ್ರಾಮದ 87 ಮನೆಗಳಿಗೆ ₹38 ಲಕ್ಷ ಹಾಗೂ ತೇರೆಗಾಳಿಯ 50 ಮನೆಗಳಿಗೆ ₹28 ಲಕ್ಷ ಅನುದಾನದಲ್ಲಿ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ವೈಜಗಾವ, ತೇರೆಗಾಳಿ ,ಕುಂಬೇಲಿ ನಾಕಾ, ಗ್ರಾಮದಲ್ಲಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಲಜೀವನ ಮಿಷನ ಯೋಜನೆಯಡಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಈ ಪೂರ್ವದಲ್ಲಿ ಶಾಸಕರು ಜಗಲಬೇಟದಲ್ಲಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿದರು.

ADVERTISEMENT

ಈ ಸಮಯದಲ್ಲಿ ಪಡಿತರ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಸಿಗುವ ₹2 ಸಾವಿರ ಖಾತೆಗಳಿಗೆ ಜಮೆ ಆಗಿಲ್ಲ ಎಂದು ಅನೇಕ ಮಹಿಳೆಯರು ಶಾಸಕರ ಗಮನಕ್ಕೆ ತಂದರು. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ತಹಶಿಲ್ದಾರ್‌ರಿಗೆ ಶಾಸಕರು ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಂಜಯ ಹಣಬರ, ತಹಶೀಲ್ದಾರ್ ಮಂಜುನಾಥ. ಎಂ, ಪಂಚಾಯತ್ ರಾಜ್ ಇಲಾಖೆಯ ಎಇಇ ಮೊಹಮ್ಮದ್ ಇಜಾನ ಸಬೂರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಆನಂದ ಬಡಕುಂದ್ರಿ, ಶಿಂಗರಗಾವ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ಯಾಮ ಮೆಂಡೊಲ್ಸಾ ಇದ್ದರು.

ಸೋಮವಾರ ಜೊಯಿಡಾ ತಾಲ್ಲೂಕಿನ ತೆರೆಗಾಳಿಯಲ್ಲಿ ಶಾಸಕ ಆರ್ ವಿ ದೇಶಪಾಂಡೆಯವರು ಜಲಜೀವನ ಮಿಷನ ಯೋಜನೆಯಡಿ ನಡೆಯುವ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.