ADVERTISEMENT

ತ್ವರಿತ ಸ್ಪಂದನೆಗೆ ಶಾಸಕರ ‘ಆ್ಯಪ್’; ಭಟ್ಕಳ ಶಾಸಕ ಸುನೀಲ ನಾಯ್ಕ ಹೊಸ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:45 IST
Last Updated 29 ಏಪ್ರಿಲ್ 2019, 12:45 IST
ಆ್ಯಪ್‌ನ ಪ್ರತಿಕ್ರಿಯ ವಿಭಾಗ.
ಆ್ಯಪ್‌ನ ಪ್ರತಿಕ್ರಿಯ ವಿಭಾಗ.   

ಕಾರವಾರ: ಭಟ್ಕಳ– ಹೊನ್ನಾವರ ಕ್ಷೇತ್ರದಬಿಜೆಪಿಶಾಸಕಸುನೀಲ ನಾಯ್ಕ, ತಮ್ಮ ಕ್ಷೇತ್ರದ ಜನರನ್ನು ಬಹಳ ಸರಳ ಹಾಗೂ ಸುಲಭವಾಗಿ ತಲುಪಲು ಮೊಬೈಲ್‌ಆ್ಯಪ್ ಬಿಡುಗಡೆಗೊಳಿಸಿದ್ದಾರೆ.‘ಸುನೀಲ್ ನಾಯ್ಕ ಎಂಎಲ್‌ಎ, ಭಟ್ಕಳ’ (Sunil Naik MLA, Bhatkal) ಎಂಬ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್‌ಸೋಮವಾರದಿಂದ ಡೌನ್‌ಲೋಡ್‌ಗೆ ಲಭ್ಯವಾಗಿದೆ.

ವಿಶ್ರುತ್ ಝಾ ಎನ್ನುವವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಸುನೀಲ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಜಾರಿಯಾದಅಭಿವೃದ್ಧಿ ಕಾರ್ಯಗಳು, ಅದಕ್ಕೆ ಮಂಜೂರಾದ ಮೊತ್ತ, ಶಂಕುಸ್ಥಾಪನೆ, ಉದ್ಘಾಟನೆ ದಿನಾಂಕ, ಸರ್ಕಾರದ ಯೋಜನೆಗಳ ಫಲಾನುಭವಿಗಳ ವಿವರ, ಶಾಸಕರ ದಿನಚರಿ ಹಾಗೂ ಕಾರ್ಯಕ್ರಮಗಳ ಮಾಹಿತಿ ಇದರಲ್ಲಿ ಲಭ್ಯವಿದೆ.

ಕ್ಷೇತ್ರದ ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಗಳನ್ನೂಈ ಆ್ಯಪ್‌ ಮೂಲಕಶಾಸಕರಗಮನಕ್ಕೆ ತರಬಹುದಾಗಿದೆ. ಇದರಲ್ಲಿರುವ ‘ಫೀಡ್‌ಬ್ಯಾಕ್’ ಆಯ್ಕೆಯನ್ನು ಒತ್ತಿ, ಅಲ್ಲಿ ತೆರೆದುಕೊಳ್ಳುವ ಪುಟದಲ್ಲಿ ಇಲಾಖಾವಾರು ದೂರುಗಳನ್ನು ಸಲ್ಲಿಸಬಹುದು. ದೂರು ಸ್ವೀಕರಿಸಿದ ದಿನಾಂಕ, ದೂರಿನ ಹಾಲಿ ಸ್ಥಿತಿ ಅಥವಾ ಸಮಸ್ಯೆ ಪರಿಹಾರವಾದ ದಿನದ ಮಾಹಿತಿ ಕೂಡ ಇದೇ ವಿಭಾಗದಲ್ಲಿ ದೊರೆಯಲಿದೆ. ‘ಗೂಗಲ್ ಪ್ಲೇಸ್ಟೋರ್‌’ನಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸುನೀಲ ನಾಯ್ಕ ದೂರವಾಣಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.