ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ದಿನಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:29 IST
Last Updated 4 ಡಿಸೆಂಬರ್ 2025, 4:29 IST
ಶಾಸಕ ದಿನಕರ ಶೆಟ್ಟಿ ಅವರು ಗೋಕರ್ಣದ ಬಸ್ ನಿಲ್ದಾಣ ಪರಿಶೀಲಿಸಿದರು
ಶಾಸಕ ದಿನಕರ ಶೆಟ್ಟಿ ಅವರು ಗೋಕರ್ಣದ ಬಸ್ ನಿಲ್ದಾಣ ಪರಿಶೀಲಿಸಿದರು   

ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣವು ಪ್ರವಾಸೋದ್ಯಮದಲ್ಲಿ ಮತ್ತೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಾಗಿದೆ. ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಬುಧವಾರ ಸೂಚಿಸಿದರು.

ಅವರು ಗೋಕರ್ಣದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಅಭಿವೃದ್ಧಿಯ ಬಗ್ಗೆ ಪರಿಶೀಲಿಸದರು. ಹೆಚ್ಚಿನ ಅಭಿವೃದ್ಧಿಯ ಬಗ್ಗೆ ₹ 3 ಕೋಟಿ ವೆಚ್ಚದ ಪ್ರಸ್ತಾವನೆಯನ್ನೂ ಸಲ್ಲಿಸುವಂತೆ ಸೂಚಿಸಿದರು.

ಮುಖ್ಯ ಸಮುದ್ರ ತೀರದಲ್ಲಿರುವ ಉದ್ಯಾನವನವನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಳ್ಳುವಂತೆ, ಬಸ್ ನಿಲ್ದಾಣದಲ್ಲಿ ಶುಚಿತ್ವ ಮತ್ತು ಪ್ರವಾಸಿಗರಿಗೆ ಒಳ್ಳೆಯ ಸೌಲಭ್ಯ ಕಲ್ಪಿಸಿಕೊಡುವುದು, ಮೇಲಿನಕೇರಿಯಲ್ಲಿನ ಬಸ್ ತಂಗುದಾಣವನ್ನು ದುರಸ್ತಿಗೊಳಿಸುವುದು, ಮೇಲಿನಕೇರಿಯಲ್ಲಿರುವ ಗ್ರಾಮ ಪಂಚಾಯ್ತಿ ಸ್ಥಳದಲ್ಲಿ ಖಾಸಗಿ ಬಸ್ಸಿಗೆ ಹೋಗುವ ಪ್ರವಾಸಿಗರಿಗೆ ಕುಳಿತುಕೊಳ್ಳಲು ಅನುಕೂಲ ಕಲ್ಪಿಸುವುದು ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸಿದರು.

ADVERTISEMENT

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಂಗಳಾ ಗೌರಿ, ಗೋಕರ್ಣ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರಾದ ಪ್ರಭಾಕರ ಪ್ರಸಾದ, ಗಣಪತಿ ನಾಯ್ಕ, ಸತೀಶ ದೇಶಭಂಡಾರಿ, ಲಕ್ಷ್ಮೀಶ ಗೌಡ, ಸಾಮಾಜಿಕ ಕಾರ್ಯಕರ್ತ ಮಹೇಶ ಶೆಟ್ಟಿ, ಕುಮಾರ ಮಾರ್ಕಾಂಡೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.