ADVERTISEMENT

ಮುಸ್ಸಂಜೆಯಲ್ಲಿ ಮುದ ನೀಡಿದ ‘ಸ್ವರ–ಲಯ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 14:47 IST
Last Updated 20 ಅಕ್ಟೋಬರ್ 2019, 14:47 IST
ಶಿರಸಿಯಲ್ಲಿ ನಡೆದ ಜುಗಲ್‌ಬಂದಿಯಲ್ಲಿ ಪ್ರಕಾಶ ಕಲ್ಲಾರೆಮನೆ ಕೊಳಲು ವಾದನ ಹಾಗೂ ವಿನಾಯಕ ಮುತ್ಮುರ್ಡು ಗಾಯನ ಪ್ರಸ್ತುತಪಡಿಸಿದರು
ಶಿರಸಿಯಲ್ಲಿ ನಡೆದ ಜುಗಲ್‌ಬಂದಿಯಲ್ಲಿ ಪ್ರಕಾಶ ಕಲ್ಲಾರೆಮನೆ ಕೊಳಲು ವಾದನ ಹಾಗೂ ವಿನಾಯಕ ಮುತ್ಮುರ್ಡು ಗಾಯನ ಪ್ರಸ್ತುತಪಡಿಸಿದರು   

ಶಿರಸಿ: ಹೊರಗೆ ಎಡೆಬಿಡದೇ ಸುರಿವ ಮಳೆ, ಒಳಗೆ ಕೊಳಲು, ತಬಲಾ, ಹಾರ್ಮೋನಿಯಂ ಸಮ್ಮಿಳಿತದ ಇಂಪಾದ ನಾದ. ಭಾನುವಾರ ಸಂಜೆ ಇಲ್ಲಿ ನಡೆದ ‘ಸ್ವರ–ಲಯ– ಜುಗಲ್‌ಬಂದಿ ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು.

ಗಾಯನದಲ್ಲಿ ವಿನಾಯಕ ಹೆಗಡೆ ಮುತ್ಮುರ್ಡು, ಕೊಳಲಿನಲ್ಲಿ ವೇಣುವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾದಲ್ಲಿ ಲಕ್ಷ್ಮೀಶರಾವ್‌ ಕಲಗುಂಡಿಕೊಪ್ಪ, ಉದಯರಾಜ್ ಕರ್ಪೂರ, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ಸಿಂಧು ಉಂಚಳ್ಳಿ, ನೈದಿಲೆ ಹೊರಾಲೆ ಸಹಕರಿಸಿದರು. ಇದಕ್ಕೂ ಮೊದಲು ಡಾ. ವಿನಾಯಕ ಸುಬ್ರಹ್ಮಣ್ಯಂ ಹಾಗೂ ಅವರ ಪುತ್ರಿ ವೈಷ್ಣವಿ ವಿನಾಯಕ ಕೊಳಲು ವಾದನ ನಡೆಸಿಕೊಟ್ಟರು. ತಬಲಾದಲ್ಲಿ ನಾಗಪತಿ ಹೆಗಡೆ ಕಾಗೇರಿ ಸಹಕಾರ ನೀಡಿದರು.

ಸಂಘಟಕರಾದ ಸತೀಶ ಹೆಗಡೆ, ಎಲ್.ಎಂ.ಹೆಗಡೆ ಗೋಳಿಕೊಪ್ಪ, ವೈಶಾಲಿ ವಿ.ಪಿ.ಹೆಗಡೆ, ರಾಘವೇಂದ್ರ ಬೆಟ್ಟಕೊಪ್ಪ, ಗಿರಿಧರ ಕಬ್ನಳ್ಳಿ, ದಿನೇಶ ಹೆಗಡೆ, ವಿನಾಯಕ ಹೆಗಡೆ ಇದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಕಾರವಾರ, ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಾವು–ನೀವು ಬಳಗ, ಸುಶಿರ ಸಂಗೀತ ಪರಿವಾರ, ಸ್ವರಶ್ರೀ ಸಂಸ್ಥೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.