ADVERTISEMENT

ಕಾರವಾರ ನೌಕಾನೆಲೆ: ಐಟಿಐ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:23 IST
Last Updated 14 ಮಾರ್ಚ್ 2024, 14:23 IST
ಕಾರವಾರದ ಕದಂಬ ನೌಕಾನೆಲೆಯ ಹಡಗು ದುರಸ್ತಿ ಅಂಗಳದಲ್ಲಿ (ನೇವಲ್ ಶಿಪ್ ರಿಪೇರ್ ಯಾರ್ಡ್) ಇಂಟರ್ನ್‌ಶಿಪ್ ನಡೆಸುವ ಸಲುವಾಗಿ ಕಾರವಾರ ಮತ್ತು ಅಂಕೋಲಾದ ನಾಲ್ಕು ಐ.ಟಿ.ಐ ಕಾಲೇಜುಗಳೊಂದಿಗೆ ಗುರುವಾರ ನೌಕಾದಳದ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡಿದ್ದು, ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಿದರು
ಕಾರವಾರದ ಕದಂಬ ನೌಕಾನೆಲೆಯ ಹಡಗು ದುರಸ್ತಿ ಅಂಗಳದಲ್ಲಿ (ನೇವಲ್ ಶಿಪ್ ರಿಪೇರ್ ಯಾರ್ಡ್) ಇಂಟರ್ನ್‌ಶಿಪ್ ನಡೆಸುವ ಸಲುವಾಗಿ ಕಾರವಾರ ಮತ್ತು ಅಂಕೋಲಾದ ನಾಲ್ಕು ಐ.ಟಿ.ಐ ಕಾಲೇಜುಗಳೊಂದಿಗೆ ಗುರುವಾರ ನೌಕಾದಳದ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡಿದ್ದು, ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಿದರು   

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯ ಹಡಗು ದುರಸ್ತಿ ಅಂಗಳದಲ್ಲಿ (ನೇವಲ್ ಶಿಪ್ ರಿಪೇರ್ ಯಾರ್ಡ್) ಇಂಟರ್ನಶಿಪ್ ನಡೆಸುವ ಸಲುವಾಗಿ ಕಾರವಾರ ಮತ್ತು ಅಂಕೋಲಾದ ನಾಲ್ಕು ಐ.ಟಿ.ಐ ಕಾಲೇಜುಗಳೊಂದಿಗೆ ಗುರುವಾರ ನೌಕಾದಳವು ಒಡಂಬಡಿಕೆ ಮಾಡಿಕೊಂಡಿದೆ.

ಬಿಣಗಾದ ಸೋಮನಾಥ ಐಟಿಐ ಕಾಲೇಜು, ಸಿದ್ದರದ ಮಲ್ಲಿಕಾರ್ಜುನ ಐಟಿಐ ಕಾಲೇಜು, ಕಾರವಾರದ ಬಾಡದಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಅಂಕೋಲಾದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯರೊಂದಿಗೆ ನೌಕಾದಳದ ಹಿರಿಯ ಅಧಿಕಾರಿಗಳು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಏಪ್ರಿಲ್ 15 ರಿಂದ ಇಂಟರ್ನ್‌ಶಿಪ್ ಪ್ರಾರಂಭವಾಗಲಿದ್ದು, ಮೊದಲ ಬ್ಯಾಚ್‍ನಲ್ಲಿ ಸುಮಾರು 175 ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ನೌಕಾದಳದ ಹಡಗುಕಟ್ಟೆಯಲ್ಲಿ ನಡೆಯುವ ಚಟುವಟಿಕೆ, ಹಡಗುಗಳ ದುರಸ್ತಿ ಕುರಿತು ಅವರಿಗೆ ತರಬೇತಿ ಪಡೆಯಲು ಉತ್ತಮ ಅವಕಾಶ ಸಿಗಲಿದೆ. ಭವಿಷ್ಯದಲ್ಲಿ ಅವರಿಗೆ ಉನ್ನತಮಟ್ಟದ ಉದ್ಯೋಗಾವಕಾಶ ಪಡೆಯಲೂ ಇದು ದಾರಿಯಾಗುವ ವಿಶ್ವಾಸವಿದೆ. ಮೊದಲ ವರ್ಷದಲ್ಲೇ ವಿವಿಧ ಬ್ಯಾಚ್‍ಗಳ ಮೂಲಕ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುವ ನಿರೀಕ್ಷೆ ಇದೆ’ ಎಂದು ನೌಕಾದಳದ ಅಧಿಕಾರಿಗಳು ಭರವಸೆ ನೀಡಿದರು.

ADVERTISEMENT

ನೌಕಾದಳದ ಹಡಗು ದುರಸ್ತಿ ಅಂಗಳದ ಜನರಲ್ ಮ್ಯಾನೇಜರ್ ಕಮೋಡೋರ್ ಗೌತಮ್ ಬೇಡಿ, ಅಡ್ಮಿರಲ್ ಸುಪರಿಂಟೆಂಡೆಂಟ್ ಅಶ್ವನಿ ಕುಮಾರ್ ಟಿಕೂ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.