ಕಾರವಾರ: ಮಕ್ಕಳ ಅಶ್ಲೀಲ ವಿಡಿಯೊವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ ಅಪರಾಧಿಗೆ ಇಲ್ಲಿನ ಸಿ.ಜೆ.ಎಂ ನ್ಯಾಯಾಲಯವು ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡವನ್ನು ವಿಧಿಸಿದೆ.
ಮಹಾರಾಷ್ಟ್ರದ ನಾಗಪುರ ಸಮೀಪದ ಶಿವನಗಾಂವ ನಿವಾಸಿ ಹರ್ಷಲ್ ರೌಲ್ (37) ಶಿಕ್ಷೆಗೆ ಗುರಿಯಾದವನು. ಆತನ ವಿರುದ್ಧ 2021ರ ಜುಲೈ 6ರಂದು ಕಾರವಾರದ ಸಿ.ಇ.ಎನ್ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಸೀತಾರಾಮ.ಪಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತನಿಖಾ ತಂಡದಲ್ಲಿ ಸಿಬ್ಬಂದಿ ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ ಹಾಗೂ ಹನುಮಂತಪ್ಪ ಕಬಾಡಿ ಕಾರ್ಯ ನಿರ್ವಹಿಸಿದ್ದರು. ಹಿರಿಯ ಸರ್ಕಾರಿ ಅಭಿಯೋಜಕ ಮಂಜುನಾಥ ನಾಯ್ಕ ಸರ್ಕಾರದ ಪರ ವಾದ ಮಂಡಿಸಿದ್ದರು.
ತನಿಖೆಯಲ್ಲಿ ಕಾರ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಪ್ರಕಟಿಸಿದ್ದಾರೆ.
ಎ.ಟಿ.ಎಂ ಕೇಂದ್ರದಲ್ಲಿ ಕಳವಿಗೆ ಯತ್ನ
ಕಾರವಾರ: ತಾಲ್ಲೂಕಿನ ಮಲ್ಲಾಪುರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಎ.ಟಿ.ಎಂ. ಕೇಂದ್ರಕ್ಕೆ ಬುಧವಾರ ರಾತ್ರಿ ಬಂದ ಅಪರಿಚಿತನೊಬ್ಬ ಕಳವು ಮಾಡಲು ಯತ್ನಿಸಿದ್ದಾನೆ. ಅಲ್ಲದೇ ಕೇಂದ್ರದ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿದ್ದಾನೆ.
ಎ.ಟಿ.ಎಂ. ಕೇಂದ್ರದ ಸೇಫ್ ಲಾಕರ್ನ ಹೊರ ಬಾಗಿಲನ್ನು ಕಿತ್ತು ಹಾಕಿದ್ದಾನೆ. ನೀಲಿ ಬಣ್ಣದ ಟಾರ್ಪಲ್ ಸುತ್ತಿಕೊಂಡು ಬಂದಿದ್ದ ಆರೋಪಿಯು, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಳಚುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.