ADVERTISEMENT

ಶಿರಸಿ: ಪಿಎಫ್‌ಐ ಮುಖಂಡನ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 14:15 IST
Last Updated 28 ಸೆಪ್ಟೆಂಬರ್ 2022, 14:15 IST
   

ಶಿರಸಿ: ಇಲ್ಲಿನ ನೆಹರೂ ನಗರದಲ್ಲಿರುವ ಪಿಎಫ್‌ಐಮುಖಂಡರೊಬ್ಬರ ಮನೆ ಮೇಲೆ ಪೊಲೀಸರು, ತಹಶೀಲ್ದಾರ್ ದಾಳಿ ನಡೆಸಿದ್ದಾರೆ.

ಪಿ.ಎಫ್‌.ಐ. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಪಾನಾವಾಲೆ (34) ಮನೆ ಮೇಲೆ ಸಂಜೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

'ಅಬ್ದುಲ್ ಗಫೂರ್ ಪಿ.ಎಫ್.ಐ. ಕಚೇರಿಯನ್ನು ಮನೆಯಲ್ಲೇ ತೆರೆದು ಕೆಲಸ ನಿರ್ವಹಿಸುತ್ತಿರುವ ಸಂಶಯವಿತ್ತು. ಹೀಗಾಗಿ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಕಳೆದ ಆರು ದಿನಗಳ ಹಿಂದಷ್ಟೆ ಗಫೂರ್ ವಿರುದ್ಧ ಪೊಲೀಸರು 107 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಈತ ತಲೆಮರೆಸಿಕೊಂಡಿದ್ದಾನೆ.

ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.