
ದಾಂಡೇಲಿ: ‘ಓದುಗರ ಮನಸ್ಸು ಮುಟ್ಟುವಂತೆ ಕವಿತೆ ಬರೆಯಬೇಕು. ಆಗ ಮಾತ್ರ ಕವಿತೆ ಜನಮಾನಸದಲ್ಲಿ ಉಳಿಯಲು ಸಾಧ್ಯ. ಅನುಭವ, ಅಧ್ಯಯನ, ನಿರಂತರ ಓದು ಕವಿತೆಯ ಜೀವಾಳ. ಕವಿತೆ ರಚನೆಗೆ ಭಾವನೆ ಬಹುಮುಖ್ಯ’ ಎಂದು ಲೇಖಕ ಫಾಲ್ಗುಣ ಗೌಡ ಹೇಳಿದರು.
ಹಳೇ ದಾಂಡೇಲಿ ನಗರಸಭೆ ಮೈದಾನದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕವಿ ಕಾವ್ಯ ಸಮಯ’ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವೇಳೆ ಷರೀಶ ಹಾರ್ಸೀಕಟ್ಟಾ, ಯಮುನಾ ಗಾಂವ್ಕರ್, ನರೇಶ ನಾಯ್ಕ, ಜಿ.ಆರ್. ತಾಂಡೇಲಿ, ಗಣಪತಿ ಹೆಗಡೆ, ಪದ್ಮಶ್ರೀ ಜೈನ್, ದೀಪಾಲಿ ಸಾಮಂತ, ನಿರಂಜನ ವಂದಿಗೆ ಸೇರಿದಂತೆ 23 ಕವಿಗಳು ಚಂದ್ರನು ಬಿಕ್ಕುತ್ತಾನೆ, ಹೊನ್ನುಡಿ, ಬದಲಾಗಿದ್ದೇನೆ ನಾನು, ಹಳದಿ ಮರ, ಹೆಸರು ಬೇಕಾಗಿದೆ, ಯೋಧ, ಮತದಾನ, ಕಾಂತಾರ ನಮನ, ಓದುಗರ ನದಿ ಸೇರಿದಂತೆ ಮುಂತಾದ ತಲೆ ಬರಹದ ಕವಿತೆಗಳನ್ನು ವಾಚಿಸಿದರು.
ರವೀಂದ್ರ ಭಟ್ಟ ಮಾತನಾಡಿದರು. ವಿನಾಯಕ ಶೇಟ್ ಹಾಗೂ ಆಶಾ ದೇಶಭಂಡಾರಿ ನಿರೂಪಿಸಿದರು. ಗಂಗಾಧರ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ಪಟಗಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.