ದಾಂಡೇಲಿ: ತುರ್ತು ನಿರ್ವಹಣಾ ಕೆಲಸದ ಅಂಗವಾಗಿ ಡಿ.7ರಂದು ಬೆಳಿಗ್ಗೆ 9.30 ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಗರದ ಸಂಡೇ ಮಾರ್ಕೆಟ್, ಲಿಂಕ್ ರೋಡ್, ಜೆ.ಎನ್.ರೋಡ್, ಸೋಮಾನಿ ಸರ್ಕಲ್‌ದಿಂದ ಪಟೇಲ್ ಸರ್ಕಲ್‌ವರೆಗೆ, ಲೆನಿನ ರೋಡ್, ಬಾಂಬೆ ಚಾಲ್, ಕಾನ್ವೆಂಟೆ ಏರಿಯಾ ಹಾಗೂ ಕೆಪಿಸಿ ಕಾಲೊನಿಯಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ವಿದ್ಯುತ್ ದುರಸ್ತಿಗೆ ಸಂಬಂಧಿಸಿದಂತೆ, ಗಿಡ ಕಡಿಯುವ ಇತರೆ ಕೆಲಸಗಳನ್ನು ಮಾಡುವುದಿದ್ದರೆ ಮುಂಚಿತವಾಗಿ ಇಲಾಖೆ ಅನುಮತಿ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.